ಸುಳ್ಳು ಸುದ್ದಿ ಪ್ರಸಾರ: ಗಡಿನಾಡಧ್ವನಿ.ಆನ್‌ಲೈನ್ ವೆಬ್‌ಪೋರ್ಟಲ್ ವಿರುದ್ಧ ಕಾನೂನು ಕ್ರಮ.

ಬಂಟ್ವಾಳ, ಜೂನ್ 24 –
ಪತ್ರಿಕಾ ನೈತಿಕತೆ ಹಾಗೂ ಸಾರ್ವಜನಿಕ ಶಾಂತಿಗೆ ಧಕ್ಕೆಯಾಗುವ ರೀತಿಯಲ್ಲಿ ಸುದ್ದಿಗಳನ್ನು ಪ್ರಕಟಿಸಿದ ಕುರಿತು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ “Gadinadadhwani.online” ಎಂಬ ವೆಬ್ ನ್ಯೂಸ್ ವಿರುದ್ಧ  ಕಾನೂನು ಕ್ರಮ ಕೈಗೊಳ್ಳಲಾಗಿದೆ.
"ಕರಾವಳಿಯಲ್ಲಿ ಮತ್ತೆ ಮುಂದುವರಿದ ತಲವಾರು ದಾಳಿ, ಸಜೀಪದಲ್ಲಿ ಕೆಲಸ ಬಿಟ್ಟು ಮನೆಗೆ ತೆರಳುತ್ತಿದ್ದ ಇಬ್ಬರು ಅಮಾಯಕ ಮುಸ್ಲಿಮರ ಮೇಲೆ ದಾಳಿ" ಎಂಬ ಶೀರ್ಷಿಕೆಯಿಂದ ಪ್ರಕಟಿಸಲಾದ ಸುದ್ದಿಯ ಅಂಶಗಳು ಸಾರ್ವಜನಿಕ ವಲಯದಲ್ಲಿ ಭಯ-ಬೀತಿಯ ವಾತಾವರಣ ಉಂಟುಮಾಡುವ ಸಾಧ್ಯತೆಯಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ.

ಇದರ ಹಿನ್ನೆಲೆಯಲ್ಲಿ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 80/2025, ಭಾರತ ದಂಡ ಸಂಹಿತೆ (BNS) ಅಡಿಯಲ್ಲಿ ಕಲಂ 240 ಪ್ರಕಾರ ದೂರು ದಾಖಲಿಸಲಾಗಿದೆ. ಈ ಕುರಿತಂತೆ ಪೊಲೀಸ್ ಇಲಾಖೆ ತನಿಖೆ ಪ್ರಾರಂಭಿಸಿದ್ದು, ಸೂಕ್ತ ದಾಖಲೆಗಳ ಪರಿಶೀಲನೆಯ ನಂತರ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

ಪೊಲೀಸ್ ಇಲಾಖೆ ಮಾಧ್ಯಮಗಳಿಗೆ ಸಂದೇಶ ನೀಡಿದ್ದು, ಯಾವುದೇ ಸುದ್ದಿಯನ್ನು ದೃಢ ಪ್ರಮಾಣ, ನೈತಿಕ ಮಾನದಂಡಗಳ ಅಡಿಯಲ್ಲಿ ಮಾತ್ರ ಪ್ರಕಟಿಸಬೇಕೆಂದು, ಇಲ್ಲವಾದರೆ ಭವಿಷ್ಯದಲ್ಲೂ ಈ ರೀತಿಯ ಪ್ರಕರಣಗಳಲ್ಲಿ ಕಾನೂನು ಕ್ರಮವನ್ನು ಎದುರಿಸಬೇಕಾಗಬಹುದು ಎಂದು ಎಚ್ಚರಿಸಿದೆ.

ಸಾರಾಂಶ: ಭದ್ರತೆ, ಶಾಂತಿ ಮತ್ತು ಸಾಮಾಜಿಕ ಸೌಹಾರ್ದತೆಗೆ ಧಕ್ಕೆಯಾಗದಂತೆ ಜವಾಬ್ದಾರಿಯುತ ವರದಿಗಳನ್ನು ನೀಡಬೇಕು ಎಂದು ಪೋಲಿಸ್ ರು ತಿಳಿಸಿದ್ದಾರೆ.

Post a Comment

Previous Post Next Post