ಕಡಬ ತಾಲ್ಲೂಕಿನ ಆಲಂಕಾರು ಗ್ರಾಮದಲ್ಲಿ ದೈವ ದೇಗುಲದ ಬಳಿ ರಾತ್ರಿ ವೇಳೆ ಸಂಭವಿಸಿದ ಅಪರಾಧ ಯತ್ನದಿಂದ ಸ್ಥಳೀಯರು ಚಕಿತರಾಗಿದ್ದಾರೆ. ದಿನಾಂಕ 10.06.2025 ರಂದು ರಾತ್ರಿ ವೇಳೆಗೆ ಆಲಂಕಾರು ಗ್ರಾಮದ ನಿವಾಸಿ ಹಾಗೂ 72 ವರ್ಷದ ವಯಸ್ಸಿನ ಎಸ್.ಡಿ. ಕೀರ್ತಿ ಎಂಬವರು ತಮ್ಮ ಗ್ರಾಮದಲ್ಲಿ ಇರುವ ದೈವಸ್ಥಾನದ ಉಸ್ತುವಾರಿಯಾಗಿ ಎಂದಿನಂತೆ ಸ್ಥಳಕ್ಕೆ ಭೇಟಿ ನೀಡಿದ್ದರು.
ಸ್ಥಳಕ್ಕೆ ಹೋದ ಸಂದರ್ಭದಲ್ಲಿ ದೈವಸ್ಥಾನದ ಬಾಗಿಲನ್ನು ಒಡೆಯಲು ಯತ್ನಿಸುತ್ತಿದ್ದ ವ್ಯಕ್ತಿಯು ಅವರ ಗಮನಕ್ಕೆ ಬಂದು, ಕೂಡಲೇ ಕೀರ್ತಿ ಅವರು ತನ್ನ ಪರಿಚಿತ ವ್ಯಕ್ತಿಗೆ ಕರೆ ಮಾಡಿ ಸಹಾಯಕ್ಕಾಗಿ ಆಹ್ವಾನಿಸಿದರು. ತಕ್ಷಣದ ಪ್ರತಿಕ್ರಿಯೆಯಿಂದ ಸ್ಥಳಕ್ಕೆ ಆಗಮಿಸಿದ ಸಹಾಯಕರೊಂದಿಗೆ ಬಾಗಿಲು ಒಡೆಯಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಹಿಡಿದು ವಿಚಾರಣೆ ನಡೆಸಿದಾಗ ಆತನು ತನ್ನ ಹೆಸರು ಹನುಮಂತರಾಯ ಯಾನೆ ಗೌಡನಗೌಡ ಎಂದು ತಿಳಿಸಿದ್ದಾನೆ.
ಪ್ರಾಥಮಿಕ ವಿಚಾರಣೆಯಲ್ಲಿ, ಆತನು ದೈವಸ್ಥಾನದಲ್ಲಿ ಬೆಲೆಬಾಳುವ ವಸ್ತುಗಳಿರಬಹುದೆಂಬ ನಂಬಿಕೆಯಿಂದ ಬಾಗಿಲು ಒಡೆಯಲು ಪ್ರಯತ್ನಿಸಿದುದಾಗಿ ಒಪ್ಪಿಕೊಂಡಿರುವುದಾಗಿ ಹೇಳಲಾಗಿದೆ. ಆರೋಪಿಯನ್ನು ಕೂಡಲೇ ಕಡಬ ಪೊಲೀಸ್ ಠಾಣೆಗೆ ಒಪ್ಪಿಸಿ ಅಧಿಕೃತ ದೂರು ದಾಖಲಿಸಲಾಗಿದೆ.
ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 45/2025ರಂತೆ, ಭಾರತೀಯ ದಂಡ ಸಂಹಿತೆಯ ಕಲಂ 331(4), 305, ಮತ್ತು 62 BNS-2023 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಲಾಗಿದೆ.
Post a Comment