ಕೆಂಜಾಳ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಮೃತ ಸದಸ್ಯರ ಕುಟುಂಬಕ್ಕೆ ಆರ್ಥಿಕ ಸಹಾಯ.


ಕೊಂಬಾರು
: ಕೆಂಜಾಳ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ, ಕೊಂಬಾರು ಇದರ ವತಿಯಿಂದ ಇತ್ತೀಚೆಗೆ ಮೃತರಾದ ಕೂತೂರು ಮೀನಾಕ್ಷಿ ಇವರ ಮನೆಗೆ ಭೇಟಿ ನೀಡಿ ಸಂಘದ ವತಿಯಿಂದ ಆರ್ಥಿಕ ನೆರವಿನ ಚೆಕ್ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ರಾಮಕೃಷ್ಣ ಹೊಳ್ಳಾರು, ಕಾರ್ಯದರ್ಶಿ ಶ್ರೀ ಈಶ್ವರ ಕಾಪಾರು, ಉಪಾಧ್ಯಕ್ಷ ಶ್ರೀ ನೀಲಪ್ಪ ಗೌಡ ಮುಗೇರು ಹಾಗೂ ನಿರ್ದೇಶಕರಾದ ಶ್ರೀಧರ ಕಾಪಾರು ಮತ್ತು ದೇವರಾಜ ಕೋಲ್ಕಜೆ ಉಪಸ್ಥಿತರಿದ್ದರು.

ಸಂಘದ ಈ ಸಹಾಯ ಹಸುಕರ ಸಾಕಾಣಿಕೆ ಮಾಡುತ್ತಿರುವ ರೈತ ಕುಟುಂಬಗಳಿಗೆ ಪ್ರೋತ್ಸಾಹ ನೀಡುತ್ತಿರುವ ಉದಾಹರಣೆಯಾಗಿದೆ. ಮೃತರಾದ ಮೀನಾಕ್ಷಿ ಅವರು ಸಂಘದ ಸದಸ್ಯೆಯಾಗಿದ್ದು, ಅವರ ಕುಟುಂಬದ ಸಂಕಷ್ಟದ ಸಂದರ್ಭದಲ್ಲಿ ಸಂಘದ ಈ ನೆರವು ಅತ್ಯಂತ ಶ್ಲಾಘನೀಯವಾಗಿದೆ.

Post a Comment

أحدث أقدم