ಕಡಬ ತಾಲೂಕಿನ ನೂಜಿಬಾಳ್ತಿಲದಲ್ಲಿರುವ "ಮರಿಯಾಲಯಂ ಸೋಶಿಯಲ್ ಸೆಂಟರ್" ವೃದ್ಧಾಶ್ರಮದಲ್ಲಿ, ಬೆಥನಿ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮಾನವೀಯ ಹಕ್ಕುಭಾವದ ಆಶಯದೊಂದಿಗೆ “ಮಾರಿಯಾಲಯದ ಅಮ್ಮಂದಿರ ಜೊತೆ ಒಂದು ದಿನ” ಎಂಬ ಸಮಾಜಸೇವಾ ಕಾರ್ಯಕ್ರಮವನ್ನು ಆಯೋಜಿಸಿದರು.
ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತಾವು ಸಂಗ್ರಹಿಸಿದ್ದ ಆಹಾರ ಸಾಮಗ್ರಿ ಹಾಗೂ ನಿತ್ಯೋಪಯೋಗಿ ವಸ್ತುಗಳನ್ನು ಆಶ್ರಮದವರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಾಜಿ ಸ್ಥಳೀಯ ಸಂಚಾಲಕರಾದ ರೆವೆರೆಂಡ್ ಫಾ. ವಿಜೋಯ್ ವರ್ಗೀಸ್ ಅವರು ಮಾತನಾಡಿ, “ವೃದ್ಧರನ್ನು ಗೌರವಿಸುವುದು ಅತ್ಯಂತ ಶ್ರೇಷ್ಠ ಧರ್ಮ” ಎಂದು ತಿಳಿಸಿದರು. ವಿದ್ಯಾರ್ಥಿಗಳು ಮುಂಬರುವ ಪೀಳಿಗೆಯಾಗಿ ಈ ರೀತಿಯ ಸಮಾಜಸೇವಾ ಚಟುವಟಿಕೆಗಳಲ್ಲಿ ಭಾಗವಹಿಸುವ ಅಗತ್ಯವಿದೆ ಎಂದರು.
ವೃದ್ಧಾಶ್ರಮದ ಮದರ್ ಸುಪೀರಿಯರ್ ರೆ. ಸಿಸ್ಟರ್ ವೀಣಾರವರಿಗೆ ಆಹಾರ ಹಾಗೂ ವಸ್ತುಗಳನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ವಿಶ್ವನಾಥ್ ಸರ್ ಮತ್ತು ಅನನ್ಯ ಮೇಡಂ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಾಡು-ನೃತ್ಯ ಪ್ರದರ್ಶಿಸಿದರು. ಆಶ್ರಮದ ನಿವಾಸಿಗಳು ಸಹ ಈ ಮನರಂಜನೆಯಲ್ಲಿ ಭಾಗಿಯಾಗಿ ತಮ್ಮ ಪ್ರತಿಭೆಯನ್ನು ತೋರಿದರು.
ಮದರ್ ಸುಪೀರಿಯರ್ ಅವರು ಶಾಲೆಯ ವಿದ್ಯಾರ್ಥಿಗಳ ಉತ್ಸಾಹ ಹಾಗೂ ಸಹಾನುಭೂತಿಯ ಕೆಲಸವನ್ನು ಶ್ಲಾಘಿಸಿದರು ಹಾಗೂ ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ಎಲ್ಲರಿಗೂ ಸಿಹಿತಿಂಡಿ ವಿತರಿಸಲಾಯಿತು.
ಪ್ರಾರಂಭದಲ್ಲಿ ಪ್ರಾಂಶುಪಾಲರಾದ ಜಾರ್ಜ್ ಟಿ ಎಸ್ ಸ್ವಾಗತಿಸಿ ಮಾತುಗಳುಗಳನ್ನು ಮಾಡಿದರೆ, ಶಿಕ್ಷಕಿ ಅನನ್ಯ ವಂದಿಸಿದರು ಮತ್ತು ಶಿಕ್ಷಕಿ ಶಿಲ್ಪಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಮಥಾಯಿ, ಬಿಜು, ಜಿನಿ, ಸಂತೋಷ್ ಮತ್ತು ಪ್ರೌಢಶಾಲಾ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Post a Comment