ಪಟ್ಲಡ್ಕ: ಕುಣಿತ ಭಜನಾ ತರಬೇತಿ ಸಮಾರೋಪ ಸಮಾರಂಭ ವಿಜೃಂಭಣೆಯಿಂದ ನಡೆಯಿತು.


ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಪಟ್ಲಡ್ಕ ಶ್ರೀ ಗಡಿಯಾಡಿ ಆದಿ ಮೊಗೇರ್ಕಳ ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಜೂನ್ 22ರಂದು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಆಶ್ರಯದಲ್ಲಿ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಬಿ.ಸಿ ಟ್ರಸ್ಟ್) ಕಡಬ, ಪ್ರಗತಿ ಬಂಧು ಸ್ವಸಹಾಯ ಒಕ್ಕೂಟ ಕಟ್ಟೆಮಜಲು ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಮಕ್ಕಳ ಹಾಗೂ ಮಹಿಳಾ ಕುಣಿತ ಭಜನಾ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಅದ್ಧೂರಿಯಾಗಿ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ವಿವಿಧ ಆಹ್ವಾನಿತ ಭಜನಾ ತಂಡಗಳಿಂದ ಭಕ್ತಿಮಯ ಭಜನೆಗಳು ನಡೆಯಿ, ದೈವಸ್ಥಾನದ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ನಡೆಯಿತು.
ಸಭೆಯಲ್ಲಿ ದೈವಸ್ಥಾನದ ಅಧ್ಯಕ್ಷ ತುಕ್ರಪ್ಪ ಶೆಟ್ಟಿ ನೂಜಿ ಗೌರವಾರ್ಪಿತ ಅಧ್ಯಕ್ಷತೆ ವಹಿಸಿದ್ದರು. ಭಜನಾ ತರಬೇತಿ ಸಮಿತಿಯ ಅಧ್ಯಕ್ಷ ಹರೀಶ್ ಪಿ. ಪಟ್ಲಡ್ಕ ಸಭಾಧ್ಯಕ್ಷತೆ ವಹಿಸಿದರು.
ಸುಬ್ರಮಣ್ಯ ಶಬರಾಯ (ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷರು) ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನೆಲ್ಯಾಡಿ ವಲಯಾಧ್ಯಕ್ಷ ಜಯಾನಂದ ಬಂಟ್ರಿಯಾಲ್ ಅವರು ಭಜನಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕರ್. ರಾಜ್ಯ ಭಜನಾ ಪರಿಷತ್ ಧರ್ಮಸ್ಥಳದ ಕಾರ್ಯದರ್ಶಿ ಸುಬ್ರಮಣ್ಯ ಪ್ರಸಾದ್ ಮಾತನಾಡಿ, ಭಜನೆಗಳ ಮೂಲಕ ದಾಸವಾಣಿ ಮೂರ್ತರೂಪ ಪಡೆಯುತ್ತಿದೆ. ಮನೆಮನೆಗಳಲ್ಲಿ ಭಜನೆ ನಡೆಯುವುದು ಭಜನಾ ಪರಿಷತ್‌ ದೃಷ್ಟಿಕೋಣ ಎಂದು ಹೇಳಿದರು.
ಅತಿಥಿಗಳಾಗಿ ಭಾಗವಹಿಸಿದ್ದವರು:

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದ.ಕ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ್
ಕೌಕ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯಕುಮಾರ್ ಗೌಡ
ಕಡಬ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಸುಂದರ ಗೌಡ ಒಗ್ಗು
ನೆಲ್ಯಾಡಿ ಪ.ಕೃ.ಪ.ಸ.ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲ್
ಯೋಜನೆ ವಲಯಾಧ್ಯಕ್ಷ ಕುಶಾಲಪ್ಪ ಗೌಡ
ಕಟ್ಟೆಮಜಲು ಅಧ್ಯಕ್ಷ ಮಾರ್ಷಲ್ ಡಿ.ಸೋಜ
ಭಜನಾ ಮಂಡಳಿ ಅಧ್ಯಕ್ಷ ಗೀತಾ ನೇಲ್ಯಡ್ಕ

ಸನ್ಮಾನ:
ಭಜನಾ ತರಬೇತುದಾರರಾದ ಸುಂದರ ಗೌಡ ಒಗ್ಗು, ಜನಾರ್ಧನ ಗೌಡ ಬಿಳಿನೆಲೆ, ತಿರುಮಲೇಶ್, ದಯಾನಂದ ರವರಿಗೆ ಸನ್ಮಾನ ಜರುಗಿತು.

ಕಾರ್ಯಕ್ರಮ ನಿರ್ವಹಣೆ:
ಸ್ವಾಗತ – ಆನಂದ (ನೆಲ್ಯಾಡಿ ವಲಯ ಮೇಲ್ವಿಚಾರಕ)
ಧನ್ಯವಾದ – ಸುಮಾ (ಸೇವಾ ಪ್ರತಿನಿಧಿ)
ನಿರೂಪಣೆ – ಶ್ರೀಮತಿ ದೀಕ್ಷಾ ಅಂಚನ್







Post a Comment

Previous Post Next Post