ಕೊಂಬಾರು: ಮಣಿಬಾಂಡ ಶಾಲೆಗಿಗೆ ಶಾಸಕಿ ಭೇಟಿ – ಬಿರುಕು ಬಿಟ್ಟ ತರಗತಿ ಕೋಣೆಗೆ ಪರಿಶೀಲನೆ.


ಕಡಬ ; ಜೂನ್.21.
ಕೊಂಬಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಣಿಬಾಂಡ ಶಾಲೆಯೊಂದರಲ್ಲಿ ತರಗತಿ ಕೋಣೆಯ ಗೋಡೆಯು ಬಿರುಕು ಬಿಟ್ಟಿರುವ ಕುರಿತು ಶಾಲಾಭಿವೃದ್ದಿ ಸಮಿತಿಯಿಂದ ಬಂದ ಮನವಿಯ ಮೇರೆಗೆ ಇಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಾಸಕಿ ಅವರು ಸ್ಥಳ ಪರಿಶೀಲನೆ ವೇಳೆ ತಕ್ಷಣ ಸಂಬಂಧಿತ ಅಧಿಕಾರಿಗಳಿಗೆ ಮತ್ತು ಇಂಜಿನಿಯರ್‌ರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದು, ಘಟನೆಯ ಕುರಿತು ಸಂಪೂರ್ಣ ವರದಿ ಸಲ್ಲಿಸುವಂತೆ ಹೇಳಿದರು.
ಅಲ್ಲದೆ ಮಕ್ಕಳ ಭದ್ರತೆ ದೃಷ್ಟಿಯಿಂದ ಪಾಠಗಳನ್ನು ಇತರ ಕೊಠಡಿಗೆ ಸ್ಥಳಾಂತರಿಸಿ ನಡೆಸುವಂತೆ ಶಾಲೆಯ ಮುಖ್ಯೋಪಾಧ್ಯಾಯರಿಗೆ ನಿರ್ದೇಶನ ನೀಡಲಾಯಿತು.
ಈ ವೇಳೆ ಪಂಚಾಯತ್ ಅಧ್ಯಕ್ಷ ಮಧುಸೂದನ್ ಕೊಂಬಾರು, ಪಂಚಾಯತ್ ಸದಸ್ಯರು, ಬಿಳಿನೆಲೆ ಸಿ.ಎ. ಬ್ಯಾಂಕ್ ಅಧ್ಯಕ್ಷ ವಾಡ್ಯಪ್ಪ ಗೌಡ, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

Post a Comment

Previous Post Next Post