ಸುಬ್ರಹ್ಮಣ್ಯ, ಜೂನ್ ,2 – ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದಡಿ ನಡೆಯುವ ಎಸ್‌ಎಸ್‌ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗಾಗಿ ಸಂಭ್ರಮಭರಿತ ಸ್ವಾಗತ ಸಮಾರಂಭವನ್ನು ಭಾನುವಾರ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಹಿರಿಯ ಸಹಶಿಕ್ಷಕ ಎಂ. ಕೃಷ್ಣ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಪ್ರಾಚಾರ್ಯ ಸೋಮಶೇಖರ ನಾಯಕ್ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ, “ಈ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುವ ಅವಕಾಶವೇ ನಿಜಕ್ಕೂ ಭಗ್ಯ. ಈ ಪವಿತ್ರ ಭೂಮಿಯಲ್ಲಿ ಶಿಕ್ಷಣ ಪಡೆದ ಅನೇಕರು ಇತ್ತೀಚೆಗೆ ದೇಶದ ವಿವಿಧ ಕ್ಷೇತ್ರಗಳಲ್ಲಿ ಅಗ್ರಸ್ಥಾನಕ್ಕೇರಿರುವ ಉದಾಹರಣೆಗಳಿವೆ. ವಿದ್ಯಾರ್ಥಿಗಳು ಶಿಸ್ತು, ಶ್ರಮ ಹಾಗೂ ತ್ಯಾಗದಿಂದ ವ್ಯಾಸಂಗ ಮಾಡಬೇಕು,” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪ್ರೌಢಶಾಲಾ ಮುಖ್ಯಗುರು ನಂದಾ ಹರೀಶ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ವೆಂಕಟೇಶ್ ಎಚ್.ಎಲ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎನ್.ಎಸ್, ಉಪಾಧ್ಯಕ್ಷ ಲೋಕೇಶ್ ಬಿ.ಎನ್, ಉಪನ್ಯಾಸಕ ರತ್ನಾಕರ ಸುಬ್ರಹ್ಮಣ್ಯ ಹಾಗೂ ಉಪನ್ಯಾಸಕ ವೃಂದದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಸಂಘದ ಸಂಚಾಲಕಿ ರೇಖಾ ರಾಣಿ ಸೋಮಶೇಖರ್, ದೈಹಿಕ ಶಿಕ್ಷಣ ಉಪನ್ಯಾಸಕ ರಾಧಾಕೃಷ್ಣ ಚಿದ್ಗಲ್, ವಿದ್ಯಾರ್ಥಿ ಸರಕಾರದ ಸಂಚಾಲಕ ಜಯಪ್ರಕಾಶ್ ಆರ್, ಉಪನ್ಯಾಸಕರಾದ ಜಯಶ್ರೀ ವಿ. ದಂಬೆಕೋಡಿ, ಗಿರೀಶ್, ಶ್ರೀಧರ್ ಪುತ್ರನ್, ಮನೋಜ್ ಕುಮಾರ್ ಬಿ.ಎಸ್, ಜ್ಯೋತಿ ಪಿ. ರೈ, ಯೋಗಣ್ಣ ಎಂ.ಎಸ್, ಸವಿತಾ ಕೈಲಾಸ್, ಸುಧಾ, ಪೂರ್ಣಿಮಾ, ಪ್ರವೀಣ್ ಎರ್ಮಾಯಿಲ್, ಸೌಮ್ಯಾ ದಿನೇಶ್, ಶ್ರುತಿ ಅಶ್ವತ್, ಭವ್ಯಶ್ರೀ ಕುಲ್ಕುಂದ, ಸೌಮ್ಯಕೀರ್ತಿ, ಮಾನಸ ಭಟ್ ಮೊದಲಾದವರು ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಕಾರ್ಯಕ್ರಮದ ಆರಂಭದಲ್ಲಿ ಪರಂಪರಿಕ ವಾಗಿ ತೆಂಗಿನ ಸಿರಿ ಅರ್ಪಿಸಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ವೆಂಕಟೇಶ್ ಎಚ್.ಎಲ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎನ್.ಎಸ್ ಪಟಾಕಿ ಸಿಡಿಸಿ ಸ್ವಾಗತ ಫಲಕ ಅನಾವರಣ ನೆರವೇರಿಸಿದರು. ವಿದ್ಯಾರ್ಥಿನಿ ಭೂಮಿಕಾ ದೇವರಗದ್ದೆ ಈ ಸಮಾರಂಭವನ್ನು ಮನೋಜ್ಞವಾಗಿ ನಿರೂಪಿಸಿದರು.
ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಘಟಕದ ಸದಸ್ಯರು, ಘಟಕದ ನಾಯಕರುಗಳಾದ ಸವಿತಾ ಕೈಲಾಸ್ ಮತ್ತು ಪ್ರವೀಣ್ ಎರ್ಮಾಯಿಲ್ ಅವರ ನೇತೃತ್ವದಲ್ಲಿ ಸಮಾರಂಭವನ್ನು ವಿಜೃಂಭಣೆಯಿಂದ ಆಯೋಜಿಸಿ, ವಿದ್ಯಾರ್ಥಿಗಳ ಪಾಲಿಗೆ ನೆನಪಾಗುವದಾದ ಒಂದು ಆದರ್ಶ ಉದಾಹರಣೆಯಾಗಿ ರೂಪಿಸಿದರು.
إرسال تعليق