ಕುಕ್ಕೆ ಸುಬ್ರಹ್ಮಣ್ಯದಲ್ಲಿ ಯಾತ್ರಿಕರ ಮೇಲಿನ ಹಲ್ಲೆ: ಖಾಸಗಿ ಏಜೆಂಟ್‌ಗಳ ಕೃತ್ಯಕ್ಕೆ -ದೇವಸ್ತಾನ ಯಾವುದೇ ಸಂಬಂಧ ಇಲ್ಲ – ಆಡಳಿತ ಸಮಿತಿಯ ಸ್ಪಷ್ಟನೆ

ಕುಕ್ಕೆ ಸುಬ್ರಹ್ಮಣ್ಯ, ಜೂನ್ 8:
ನಿನ್ನೆ (ಜೂನ್ 7) ಸಂಭವಿಸಿರುವ ಯಾತ್ರಿಕರ ಮೇಲಿನ ಹಲ್ಲೆ ಸಂಬಂಧಿಸಿದ ಘಟನೆಗೆ ಸಂಬಂಧಪಟ್ಟಂತೆ ಕೆಲವು ಭ್ರಾಂತಿಯ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದೆ. ಈ ಕುರಿತು ಸ್ಪಷ್ಟಪಡಿಸಲು ನಾವು ಬದ್ಧರಾಗಿದ್ದೇವೆ.

       ಕುಕ್ಕೆ ಸುಬ್ರಹ್ಮಣ್ಯ ಹಲ್ಲೆ ಘಟನೆಗೆ     ದೇವಸ್ಥಾನ ಸಂಬಂಧವಿಲ್ಲ – ಅಧ್ಯಕ್ಷ                         ಹರೀಶ್ ಇಂಜಾಡಿ                                              ಸ್ಪಷ್ಟನೆ


ಸಂಬಂಧಿತ ಘಟನೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಂಭವಿಸಿದೀತು ಸತ್ಯ, ಆದರೆ ಈ ಘಟನೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಅಥವಾ ದೇವಸ್ಥಾನದ ಸಿಬ್ಬಂದಿ ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿಲ್ಲ. ಲಾಡ್ಜ್ ಗ್ರಾಹಕರನ್ನು ಸೆಳೆಯುವ ಖಾಸಗಿ ವಸತಿ ಗೃಹಗಳ ಏಜೆಂಟ್‌ಗಳು ತಮ್ಮ ವ್ಯಾಪಾರದ ನಿಮಿತ್ತ ಯಾತ್ರಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ ಘಟನೆ ಇದಾಗಿದೆ.



ಈ ವಿಷಯ ನಮ್ಮ ಗಮನಕ್ಕೆ ಬಂದ ತಕ್ಷಣ, ಸುಬ್ರಹ್ಮಣ್ಯ ಪೊಲೀಸ್ ಠಾಣೆ ಅಧಿಕಾರಿಗಳಿಗೆ ವಿಷಯವನ್ನು ತಿಳಿಸಲಾಗಿದ್ದು, ಅವರು ಈಗಾಗಲೇ ಸೂಕ್ತ ಕ್ರಮ ಕೈಗೊಂಡಿದ್ದಾರೆ. ಭಕ್ತಾದಿಗಳು ಭಯಭೀತರಾಗಬೇಕಾಗಿಲ್ಲ; ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭದ್ರತೆ ಕಾಪಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ.

ಕೆಲವೊಂದು ದೇವಸ್ಥಾನದ ಆಸುಪಾಸಿನ ಪ್ರದೇಶದಲ್ಲಿರುವ ವಸತಿ ಗೃಹಗಳು ಎಂದು ಬಿಂಬಿಸಲಾಗಿದೆ, ಆ ತಪ್ಪು ಮಾಹಿತಿ ಹರಡುತ್ತಿದ್ದು ಈ ಘಟನೆ ನಡೆದಿರುವುದು ಖಾಸಗಿ ವಸತಿ ಗ್ರಹಗಳ ಏಜೆಂಟುಗಳಿಂದ ಈ ಕೃತ್ಯಗಳು ನಡೆದಿರುತ್ತದೆ ಹೊರತು 
ಯಾವುದೇ ದೇವಸ್ಥಾನದ ಅಧಿಕೃತ ವಸತಿಗ್ರಹದ ನಿರ್ವಾಹಕರಿಂದ ಅಲ್ಲ.
ದೇವಸ್ಥಾನದ ವತಿಯಿಂದ ವಸತಿ ಗೃಹಗಳ ಹಾಗೂ ಕೊಟ್ಟಡಿಗಳ ಸಂಖ್ಯೆ ಕಡಿಮೆ ಇದ್ದು ಮುಂದಿನ ದಿನಗಳಲ್ಲಿ ಒಂದು ಸಾವಿರ ಕ್ಕೂ ಹೆಚ್ಚು ಕೊಠಡಿಗಳನ್ನು ಹೊಂದಿರುವ ವಸತಿಗೃಹಗಳನ್ನು ನಿರ್ಮಾಣ ಮಾಡಲಿದ್ದೇವೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಭಕ್ತರಿಗೆ ಇನ್ನಷ್ಟು ಹೆಚ್ಚಿನ ಅನುಕೂಲತೆಗಳನ್ನು ಮಾಡುತ್ತೇವೆ.

ದೇವಸ್ಥಾನದ ಹೆಸರಿಗೆ ಮಸಿ ಬಳಿಯುವಂತಹ ಯಾವುದೇ ಘಟನೆಗಳನ್ನು ಸಹಿಸುವುದಿಲ್ಲ. ಈ ಹಿಂದಿನಂತೆ ಭಕ್ತಾದಿಗಳಿಗೆ ಸಂಪೂರ್ಣ ಭದ್ರತೆ ಇರುತ್ತದೆ.

ನಾವು ಸಾರ್ವಜನಿಕರಲ್ಲಿ ಹರಡುತ್ತಿರುವ ತಪ್ಪುಮಾಹಿತಿಗೆ ತಕ್ಕ ಸ್ಪಷ್ಟನೆ ನೀಡುತ್ತಿದ್ದು, ಭಕ್ತಾದಿಗಳು ಯಾವುದೇ ಆತಂಕವಿಲ್ಲದೆ ಕ್ಷೇತ್ರಕ್ಕೆ ಬಂದು ತಮ್ಮ ಧಾರ್ಮಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ವಿನಂತಿಸುತ್ತೇವೆ.

– ಹರೀಶ್ ಇಂಜಾಡಿ,
ಅಧ್ಯಕ್ಷರು,
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ

Post a Comment

Previous Post Next Post