ಸುಬ್ರಹ್ಮಣ್ಯ ರೋಟರಿ ಇಂದ ಪರಿಸರ ಸಂರಕ್ಷಣಾ ಅಭಿಯಾನ.

 ಸುಬ್ರಹ್ಮಣ್ಯ ಜೂನ್ 27 : ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಪರಿಸರ ಸ್ವಚ್ಛತೆ, ಗಿಡ ನೆಡುವುದು, ಬೆಳೆಸುವುದು, ಸಂರಕ್ಷಿಸುವುದು, ಹಾಗೂ ಪಕ್ಕದ ಅರಣ್ಯ ಪ್ರದೇಶಗಳಿಗೆ ತೆರಳಿ ರಸ್ತೆ ಬದಿ ಅಥವಾ ಬರಡು ಪ್ರದೇಶಗಳಲ್ಲಿ ಗಿಡ ನೆಡುವುದು, ಬೀಜ ಬಿತ್ತುವುದು, ಇತ್ಯಾದಿಗಳ ಬಗ್ಗೆ ವಿಶೇಷವಾದ ಮಾಹಿತಿಗಳನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಕ್ರಿಯಾಶೀಲ ಸದಸ್ಯ ಡಾ. ರವಿ ಕಕ್ಕೆಪದವು ಹಾಗೂ ಗೋಪಾಲ ಎಣ್ಣೆ ಮಜಲ್ ಅವರ ಮುಂದಾಳತ್ವದಲ್ಲಿ ಕುಮಾರಧಾರ ದೋಣಿ ಮಕ್ಕಿ ಪರಿಸರದಲ್ಲಿ ನಡೆಯಿತು. ತದನಂತರ ನಡೆದ ಸರಳ ಸಮಾರಂಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷ ಚಂದ್ರಶೇಖರ ನಾಯರ್, ನಿಯೋಜಿತ ಅಧ್ಯಕ್ಷ ಜಯಪ್ರಕಾಶ್ ಆರ್, ಜೋನಲ್ ಲೆಫ್ಟಿನೆಂಟ್ ವಿಶ್ವನಾಥ ನಡುತೋಟ ನಿಯೋಜಿತ ಅಸಿಸ್ಟೆಂಟ್ ಗವರ್ನರ್ ಬಾಲಕೃಷ್ಣ ಪೈ ನಿಯೋಜಿತ ಜೋನಲ್ ಲೆಫ್ಟಿನೆಂಟ್ ವಿಜಯ್ ಕುಮಾರ್ ಕಾರ್ಯದರ್ಶಿ ಚಿದಾನಂದ ಕುಳ,ನಿಯೋಜಿತ ಕಾರ್ಯದರ್ಶಿ ಭವಾನಿ ಶಂಕರ ಪೈಲಾಜೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಬ್ರಮಣ್ಯ ರೋಟರಿ ಕ್ಲಬ್ಬಿನ ಪೂರ್ವ ಅಸಿಸ್ಟೆಂಟ್ ಗವರ್ನರ್ಗಳು, ಪೂರ್ವ ಜೊನಲ್ ಲೆಫ್ಟಿನೆಂಟುಗಳು, ಪೂರ್ವ ಅಧ್ಯಕ್ಷರುಗಳು, ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕ್ಲಬ್ಬಿಗೆ ಹೊಸದಾಗಿ ಸೇರ್ಪಡೆಗೊಳ್ಳಲಿರುವ ಸುಬ್ರಹ್ಮಣ್ಯದ ಬ್ಯಾಂಕ್ ಆಫ್ ಬರೋಡ ಮ್ಯಾನೇಜರ್ ಕೃಷ್ಣಪ್ರಸಾದ್ ಅವರನ್ನ ಬರಮಾಡಿಕೊಳ್ಳಲಾಯಿತು.

Post a Comment

أحدث أقدم