*ಸುಬ್ರಹ್ಮಣ್ಯದ ಬಿಸಿ‌ಎಂ ಹಾಸ್ಟೆಲ್ ಗೆ ಮೇಲ್ದರ್ಜೆ ಒದಗಿಸಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಅವರಿಗೆ ಪ್ರೆಸ್ ಕ್ಲಬ್ ಅಧ್ಯಕ್ಷರ ಮನವಿ*


ಕುಕ್ಕೆ ಸುಬ್ರಹ್ಮಣ್ಯ
, ಜೂನ್ 7:
ಸುಬ್ರಹ್ಮಣ್ಯದ ಪ್ರಸಿದ್ಧ ಕಾಶಿ ಕಟ್ಟೆ ಸಮೀಪವಿರುವ ಬಿಸಿ‌ಎಂ (BCM) ಹಾಸ್ಟೆಲ್ ಅನ್ನು ಮೇಲ್ದರ್ಜೆಗೇರಿಸಿ, ಅಲ್ಲಿಗೆ 250 ವಿದ್ಯಾರ್ಥಿನಿಯರಿಗೆ ವಸತಿ ಸೌಲಭ್ಯ ಒದಗಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ರಾಜ್ಯ ಆಡಳಿತ ಸಿಬ್ಬಂದಿ ಸುಧಾರಣಾ ಕಾರ್ಯದರ್ಶಿಯಾದ ತುಳಸಿ ಮದ್ದಿನೇನಿ ಅವರಿಗೆ ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ವಿಶ್ವನಾಥ ನಡುತೋಟ ಮಂಗಳವಾರ ಒತ್ತಾಯಿಸಿದರು.

ತುಳಸಿ ಮದ್ದಿನೇನಿ ಅವರು ಸರಕಾರಿ ಭೇಟಿಯೊಂದರಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಈ ಮನವಿ ಸಲ್ಲಿಸಲಾಯಿತು. ಪ್ರಸ್ತುತ ಹಾಸ್ಟೆಲ್ ಸೌಲಭ್ಯಗಳು ಅಪೂರ್ಣವಾಗಿದ್ದು, ಸ್ಥಳೀಯ ವಿದ್ಯಾರ್ಥಿನಿಯರು ಭದ್ರತೆ ಮತ್ತು ಮೂಲಭೂತ ಸೌಲಭ್ಯಗಳ ಕೊರತೆಯಿಂದ ಸಂತ್ರಸ್ತರಾಗುತ್ತಿದ್ದಾರೆ.

"ವಿದ್ಯಾರ್ಥಿನಿಯರ ಭವಿಷ್ಯ ಕಟ್ಟುವಲ್ಲಿ ಸರ್ಕಾರ ದಿಟ್ಟ ಹೆಜ್ಜೆ ಇಡಬೇಕು. ಸುಬ್ರಹ್ಮಣ್ಯದಂತಹ ತೀರ್ಥ ಕ್ಷೇತ್ರದಲ್ಲಿ ಉತ್ತಮ ಗುಣಮಟ್ಟದ ಹಾಸ್ಟೆಲ್ ಅಗತ್ಯವಾಗಿದೆ" ಎಂಬುದು ವಿಶ್ವನಾಥ ನಡುತೋಟ ಅವರ ಆಗ್ರಹ.

Post a Comment

Previous Post Next Post