ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಆಡಳಿತದ ಎಸ್‌ಎಸ್‌ಪಿಯು ಕಾಲೇಜಿನಲ್ಲಿ 2025–26ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮ ಜೂನ್ 28ರಂದು ವಿಜೃಂಭಣೆಯಿಂದ ನಡೆಯಿತು. ಸಮಾರಂಭವನ್ನು ಪತ್ರಕರ್ತ ದುರ್ಗಾಕುಮಾರ್ ನಾಯರ್‌ಕೆರೆ ದೀಪ ಬೆಳಗಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, "ನಾಯಕತ್ವಕ್ಕೆ ಸಮಯಪಾಲನೆ, ಗುರಿ ಸ್ಪಷ್ಟತೆ ಮತ್ತು ಮೌಲ್ಯಾಧಾರಿತ ಬದುಕು ಅತ್ಯಗತ್ಯ. ರೀಲ್ಸ್‌ನ ಕಲ್ಪನೆಗಿಂತ ರೀಯಲ್ ಜೀವನವೇ ಹೆಚ್ಚು ಪ್ರಭಾವಶಾಲಿ" ಎಂದರು. ಶಿಕ್ಷಣ ಮತ್ತು ಸಂಸ್ಕೃತಿಯ ಸಮನ್ಯಯವೇ ಯುವ ಜನಾಂಗದ ಪ್ರಗತಿಗೆ ದಾರಿ ತೋರುತ್ತದೆ ಎಂದೂ ಹೇಳಿದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜು ಆಡಳಿತ ಮಂಡಳಿ ಸದಸ್ಯ ಹಾಗೂ ದೇವಳದ ವ್ಯವಸ್ಥಾಪನಾ ಸಮಿತಿಯ ಅಶೋಕ್ ನೆಕ್ರಾಜೆ ಅವರು, ವಿದ್ಯಾರ್ಥಿ ಸಂಘಗಳು ನಾಯಕತ್ವದ ಜ್ಞಾನ ಕಲಿಸುವ ಪಾಠ ಪುಸ್ತಕಗಳಂತೆ, ಎಂದು ಅಭಿಪ್ರಾಯಪಟ್ಟರು. ಶಿಕ್ಷಣ ತಂತ್ರಾಂಶ ಮತ್ತು ಮೂಲಸೌಕರ್ಯ ಸುಧಾರಣೆಗೆ ನೂತನ ಸಮಿತಿ ರಚನೆಯ ಭರವಸೆ ನೀಡಿದರು.
ಪ್ರಮುಖ ಅತಿಥಿಗಳಾಗಿ:
ಮಾಜಿ ಧಾರ್ಮಿಕ ಪರಿಷತ್ ಸದಸ್ಯೆ ವಿಮಲಾ ರಂಗಯ್ಯ,
ಗ್ರಾ.ಪಂ.ಸದಸ್ಯೆ ಭಾರತಿ ದಿನೇಶ್,
ಕನ್ನಡ ಪ್ರಾಧ್ಯಾಪಕ ಉದಯಕುಮಾರ್,
ಪ್ರಾಚಾರ್ಯ ಸೋಮಶೇಖರ ನಾಯಕ್,
ಸಾಂಸ್ಕೃತಿಕ ಸಂಘ ಸಂಚಾಲಕಿ ರೇಖಾರಾಣಿ ಸೋಮಶೇಖರ್,
ವಿದ್ಯಾರ್ಥಿ ಸಂಘ ಸಂಚಾಲಕ ಜಯಪ್ರಕಾಶ್ ಆರ್,
ಮತ್ತು ವಿದ್ಯಾರ್ಥಿ ನಾಯಕರು ವೇದಿಕೆಯನ್ನು_ಅಲಂಕರಿಸಿದರು.
ಕಾರ್ಯಕ್ರಮದ ಹೈಲೈಟ್ಸ್:
ದೀಪ ಬೆಳಗಿ ಸಮಾರಂಭ ಉದ್ಘಾಟನೆ
ಬಿತ್ತಿಪತ್ರ ಅನಾವರಣ
ವಿದ್ಯಾರ್ಥಿ ನಾಯಕರಿಗೆ ಪ್ರಮಾಣವಚನ
ವಿದ್ಯಾರ್ಥಿನಿ ರಕ್ಷಾ ಸ್ವಾಗತ
ಪೂಜಾಶ್ರಿ ನಿರೂಪಣೆ
ಉಪನ್ಯಾಸಕಿ ಶ್ರುತಿ ಅಶ್ವತ್ಥ್ ಅವರ ಸಹಕಾರ
ಗ್ರಾಮೀಣ س್ಶಾಲೆಯ ಯುವ ಮನಸ್ಸುಗಳಲ್ಲಿ ನಾಯಕತ್ವದ ಕಿರಣ ಹಚ್ಚಿದ ಈ ಕಾರ್ಯಕ್ರಮ, ಶಿಕ್ಷಣ ಕ್ಷೇತ್ರದಲ್ಲಿ ಒಂದು ಸ್ಪೂರ್ತಿದಾಯಕ ಹೆಜ್ಜೆಯಾಯಿತು.
إرسال تعليق