ಸುಬ್ರಹ್ಮಣ್ಯ ಜೂನ್ 22 : ಸುಬ್ರಹ್ಮಣ್ಯದ ಡಾ. ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್, ಕುಕ್ಕೆ ಶ್ರೀ.ಸೀನಿಯರ್ ಚೇಂಬರ್,ಹಾಗೂ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಜಂಟಿಯಾಗಿ ಸುಬ್ರಹ್ಮಣ್ಯದ ಪಾರ್ಕಿಂಗ್ ಪ್ರದೇಶ, ಕುಮಾರಧಾರ ಸ್ಥಾನಗಟ್ಟ, ಮುಖ್ಯರಸ್ತೆಯ ಇಕ್ಕಲೆಗಳಲ್ಲಿ, ಬಿಲದ್ವಾರ, ಕಾಶಿ ಕಟ್ಟೆ ಅಕ್ಕಪಕ್ಕ, ಗಳಲ್ಲಿ ಶೇಖರಣೆಗೊಂಡ ಹಾಗೂ ಎಲ್ಲೆಂದರಲ್ಲಿ ಬಿಸಾಡಿದ ಪ್ಲಾಸ್ಟಿಕ್ ಬಾಟಲ್ ಗಳು ಪ್ಲಾಸ್ಟಿಕ್ ಚೀಲಗಳು ಕಸ ಕಡ್ಡಿ ಕಾಗದ ಕಚ್ಚಾ ವಸ್ತುಗಳು ಇತ್ಯಾದಿಗಳಿಂದಗಳನ್ನು ರವಿ ಕಕ್ಕೆ ಪದವ ಸಮಾಜ ಸೇವ ಟ್ರಸ್ಟ್ ನ ಸದಸ್ಯರು ಹಾಗೂ ಸೀನಿಯರ್ ಚೇಂಬರ್ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಗ್ರಾಮ ಪಂಚಾಯತ್ ಹಾಗೂ ಪಿಕಪ್ ವಾಹನಗಳಲ್ಲಿ ತುಂಬಿಸಿ ಹಿಂಜಾಡಿಯಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯ ಘಟಕಕ್ಕೆ ಕೊಂಡೊಯ್ಯಲಾಯಿತು.
ಈ ಸಂದರ್ಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ನ ಕಾರ್ಯದರ್ಶಿ ಗೋಪಾಲಣ್ಣ ಎಣ್ಣೆ ಮಜಲ್ ಮಾತನಾಡಿ " ಸ್ವಚ್ಛತೆ ಎಲ್ಲಿದೆಯೋ ಅಲ್ಲಿ ದೇವರ ಸಾನಿಧ್ಯ ಇದೆ, ಎಲ್ಲರೂ ಸ್ವಚ್ಛತೆಗೆ ಆದ್ಯ ಕರ್ತವ್ಯ ನೀಡಲೇಬೇಕು ಕುಕ್ಕೆ ಕ್ಷೇತ್ರದಲ್ಲಿಂತು ಸ್ವಚ್ಛತೆಗೆ ಪ್ರತಿಯೊಬ್ಬರು ಕೈಜೋಡಿಸಲೇಬೇಕು. ಹಾಗೆಯೇ ಸುಬ್ರಮಣ್ಯದಲ್ಲಿ ವ್ಯಾಪಾರ ಮಾಡುತ್ತಿರುವ ಅಂಗಡಿಯವರು ಪ್ಲಾಸ್ಟಿಕ್ ಚೀಲವನ್ನು ಬಳಸದೆ ಆದಷ್ಟು ಬಟ್ಟೆ ಚೀಲವನ್ನೇ ಬಳಸಬೇಕಾಗಿ ವಿನಂತಿಸಿಕೊಂಡಿದ್ದಾರೆ. ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸೀನಿಯರ್ ಸಿಂಬಲ್ ನ ಸ್ಥಾಪಕ ಅಧ್ಯಕ್ಷ ವಿಶ್ವನಾಥ ನಡುತೋಟ ರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಸಂಸ್ಥಾಪಕ ಡಾl ರವಿ ಕಕ್ಕೆ ಪದವು, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧಿಕಾರಿ ಮೋನಪ್ಪ ಡಿ, ಸಮಯ ಸೇವಾ ಟ್ರಸ್ಟ್ ಸುಮಾರು 40 ಸ್ವಯಂ ಸೇವಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವರು.
ಸಾರ್ವಜನಿಕರಿಗೆ ಸೂಚನೆ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬರುವ ಸಾರ್ವಜನಿಕರು ಹಾಗೂ ಭಕ್ತಾದಿಗಳು ಪ್ಲಾಸ್ಟಿಕ್ ಗೆ ಸಂಬಂಧಪಟ್ಟ ಯಾವುದೇ ವಸ್ತುಗಳನ್ನ ತರಬಾರದು. ಈಗಾಗಲೇ ಮುಜರಾಯಿ ಇಲಾಖೆಯಿಂದ ಆದೇಶವಾದಂತೆ ಇದೇ 15ನೇ ತಾರೀಖಿನಿಂದ ಪ್ಲಾಸ್ಟಿಕ್ ಅನ್ನ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ಗೆ ಸಂಬಂಧ ಪಟ್ಟ ಯಾವುದೇ ವಸ್ತು ಗಳನ್ನು ಉಪಯೋಗಿಸಬಾರದು. ಹಾಗೂ ಪ್ಲಾಸ್ಟಿಕ್ ಅಲ್ಲಿ ಪಾರ್ಸೆಲ್ ಕೂಡ ನೀಡಬಾರದು.ಬಟ್ಟೆ ಚೀಲಗಳನ್ನೇ ಉಪಯೋಗಿಸಬೇಕು ಇದಕ್ಕೆ ತಪ್ಪಿದಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಹಾಗೂ ಪೊಲೀಸ್ ಇಲಾಖೆಯವರು ದಂಡ ವಿಧಿಸುತ್ತಾರೆ ಎಂಬುದನ್ನು ಗಮನದಲ್ಲಿಟ್ಟು ಕೊಂಡು ಸಹಕರಿಸಬೇಕಾಗಿ ವಿನಂತಿ.
Post a Comment