ನೆಲ್ಯಾಡಿ, ಜೂನ್ 24 – “ಪೋಷಕರ ನಂಬಿಕೆ, ಶಿಕ್ಷಕರ ಮಾರ್ಗದರ್ಶನ, ವಿದ್ಯಾರ್ಥಿಗಳ ಬೆಳವಣಿಗೆಗೆ ಹೊಸ ಬಲವರ್ಧಕ” ಎಂಬ ತತ್ವದಂತೆ, ಜ್ಞಾನೋದಯ ಬೆಥನಿ ಪಿಯು ಕಾಲೇಜಿನಲ್ಲಿ 2025-26ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯು ನೆರವೇರಿತು.
ಈ ಮಹತ್ವದ ಕಾರ್ಯಕ್ರಮವು ಬೆಥನಿ ವಿದ್ಯಾಸಂಸ್ಥೆಯ ರಜತ ಮಹೋತ್ಸವ ಸಭಾಂಗಣದಲ್ಲಿ ಜೂನ್ 24 ರಂದು ನಡೆಯಿತು. ಸಭೆಯಲ್ಲಿ ಶಿಕ್ಷಕರು ಮತ್ತು ಪೋಷಕರು ಸಮೂಹವಾಗಿ ಭಾಗವಹಿಸಿ, ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಪದಾಧಿಕಾರಿಗಳ ಆಯ್ಕೆ ಹೀಗಿದೆ:
ಜೊತೆ ಕಾರ್ಯದರ್ಶಿ – ಮೇರಿ ಸ್ಟೆಫಿ
ಕಾರ್ಯದರ್ಶಿ – ಶಿಕ್ಷಕಿ ರಾಜಮ್ಮ
ಸದಸ್ಯರಾಗಿ ಆಯ್ಕೆಯಾದವರು: ನಿಖಿಲ್, ಶ್ರೀಮತಿ ನಿಕ್ಷಿತಾ, ರಜಿಕ್, ಪ್ರಕಾಶ್, ವಂದನಾ, ಲೀನಾ, ಜೇಸ್ವಿಯಾ, ಹಸೀನಾ, ಜೋಸ್ ಪಿ., ಯಶೋಧ, ಹರಿಪ್ರಸಾದ್, ಸಲೀಂ, ಜೀನಿಷಾ ಟಿ., ಶಾಜಿ, ಕುಮರೇಂದ್ರ, ಮಲ್ಲಿಕಾ, ಪ್ರಿಯಾ, ದೀಪಾ ಸನೀಶ್, ಹಮೀದ್ ಕೆ.ಎಸ್., ಜೋಸ್ ವಿ.ಜೆ., ಸಮೀನಾ, ಮರಿಯಾ, ಸತೀಶ್ ಕೆ.ಎಸ್., ಸುಮಯ್ಯ.ಉದಯ ಕುಮಾರ್ ಗೌಡ, ಪ್ರಶಾಂತ್, ಪ್ರೆಸ್ಸಿ ರೋಹನ್, ಟೈಟಸ್, ರಂಜನ್.
ಈ ಸಭೆಯಲ್ಲಿ ಕಾಲೇಜಿನ ಸಂಚಾಲಕರಾದ ಫಾ. ಜೈಸನ್ ಸೈಮನ್, ಪ್ರಾಂಶುಪಾಲರಾದ ವರ್ಗಿಸ್ ಕೈಪಾನಡ್ಕ, ಫಾ. ಶ್ಯಾಮುವೆಲ್, ಮುಖ್ಯಶಿಕ್ಷಕ ಜಾರ್ಜ್ ಕೆ.ತೋಮಸ್, ಜೋಸ್ ಪ್ರಕಾಶ್ ಹಾಗೂ ಮೋನೋಜ್ ಟಿ. ಉಪಸ್ಥಿತರಿದ್ದು, ನೂತನ ತಂಡಕ್ಕೆ ಶುಭಹಾರೈಸಿದರು.
ಈ ಸಭೆಯು ಪೋಷಕರ ಹಾಗೂ ಶಿಕ್ಷಕರ ನಡುವಿನ ಸಂವಹನವನ್ನು ಬಲಪಡಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ನೆರವಾಗುವ ಆಶಯ ವ್ಯಕ್ತವಾಯಿತು.
إرسال تعليق