"ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದ ‘ಗೌರಿ ಬ್ರೈಡಲ್ ಶಾಲೂಸ್’ ಅಕಾಡೆಮಿ:ಸಾಂಪ್ರದಾಯಿಕ ಶೈಲಿಯ ಹೊಸ ಹಾದಿ ಆರಂಭ"


ಶಾಲಿನಿ ಅವರ ಮಾಲಕತ್ವದಲ್ಲಿ ಕಲೆಯ ಹೊಸ ತಾಣಕ್ಕೆ ಚಾಲನೆ

ಸುಳ್ಯ, ಜೂನ್ 13:
ಸುಳ್ಯ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರುಗಡೆಯ ಸಿ.ಎ ಬ್ಯಾಂಕ್ ಬಿಲ್ಡಿಂಗ್‌ನಲ್ಲಿ ನೂತನ “ಗೌರಿ ಬ್ರೈಡಲ್ ಶಾಲೂಸ್ ಮೇಕಪ್ & ಹೇರ್ ಅಕಾಡೆಮಿ”ಗೆ ಜೂನ್ 13ರಂದು ಶ್ರೇಷ್ಠ ಆರಂಭ ದೊರೆತಿದೆ. ಈ ಅಕಾಡೆಮಿಯನ್ನು ಶಾಲಿನಿ ಅವರು ಸ್ಥಾಪಿಸಿದ್ದು, ಮೇಕಪ್ ಮತ್ತು ಹೇರ್ ಸ್ಟೈಲಿಂಗ್ ಕ್ಷೇತ್ರದಲ್ಲಿ ತಕ್ಷಣಿಯ ತರಬೇತಿ ಹಾಗೂ ಉದ್ಯೋಗಾವಕಾಶ ಕಲ್ಪಿಸುವ ದಿಸೆಯಲ್ಲಿ ಮುಂದಾಗಿದೆ.

ಕಾರ್ಯಕ್ರಮದಲ್ಲಿ ಮೊದಲಿಗೆ ಕಲ್ಲುಗುಂಡಿ ಪ್ರಭಾಕರ್ ಭಟ್ ಅವರು ಗಣಪತಿ ಪೂಜೆ ಮತ್ತು ಲಕ್ಷ್ಮೀ ಪೂಜೆಯನ್ನು ನೆರವೇರಿಸಿದರು. ಅಧಿಕೃತ ಉದ್ಘಾಟನೆಯನ್ನು ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ರಿಬ್ಬನ್ ಕಟ್ ಮಾಡುವ ಮೂಲಕ ನೆರವೇರಿಸಿದರು. ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರ ಬಿದಿರೆ ದೀಪ ಬೆಳಗಿಸಿ ಶುಭಕೋರಿದರು.

ಸಿ.ಎ ಬ್ಯಾಂಕ್ ಅಧ್ಯಕ್ಷ ವಿಕ್ರಮ್, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಬಳಿಕ ಅತಿಥಿಗಳಿಗೆ ಗೌರವಾರ್ಪಣೆ ಮತ್ತು ಸ್ಮರಣಾರ್ಥ ಗಿಡ ವಿತರಣೆ ನಡೆಯಿತು.

ಕಾರ್ಯಕ್ರಮದಲ್ಲಿ ಮಂಗಳೂರಿನ ಎಜುಕೇಟರ್ ಲಶ್ ಮೇಕಪ್ & ಹೇರ್ ಅಕಾಡೆಮಿಯ ನಿರೀಕ್ಷಾ, ರಾಜು ಪಂಡಿತ್, ಸಿ.ಎ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರ ಸುದರ್ಶನ, ಪಿ.ಎಲ್.ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಸೋಮನಾಥ್ ಪೂಜಾರಿ, ಹೇಮಂತ್ ಕಂದಡ್ಕ, ಲಕ್ಷ್ಮೀ ಜ್ಯುವೆಲ್ಲರ್ಸ್ ಮಾಲೀಕ ಪ್ರಶಾಂತ್ ಆಚಾರ್ಯ ಕಾಯರ್ತೋಡಿ, ಇಂಟಲಿಜೆನ್ಸ್ ಅಧಿಕಾರಿ ರಾಜೇಶ್ ಹಾಗೂ ಮಾಲಕರ ಕುಟುಂಬಸ್ಥರು ಉಪಸ್ಥಿತರಿದ್ದರು.
ಸ್ಥಾಪನೆಯ ಈ ಹೆಜ್ಜೆಯು, ಸ್ಥಳೀಯ ಯುವತಿಯರಿಗೆ ಮತ್ತು ಆಸಕ್ತರಿಗೆ ಸೌಂದರ್ಯ ಕ್ಷೇತ್ರದಲ್ಲಿ ಪ್ರಾಯೋಗಿಕ ಕಲಿಕೆಗೆ ಸಹಾಯ ಮಾಡುವ ನಿರೀಕ್ಷೆಯಿದೆ.

Post a Comment

Previous Post Next Post