ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೇ 8ರಂದು ಅಕ್ರಮ ಜುಗಾರಿ ಆಟ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭಿಸಿದ್ದ ಹಿನ್ನೆಲೆ, ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕ (ಪಿಎಸ್‌ಐ) ಕೌಶಿಕ್ ಬಿ.ಸಿ ಅವರು ಸ್ಥಳಕ್ಕೆ ದಾಳಿ ನಡೆಸಿದರು. ಆದರೆ, ಸ್ಥಳದಲ್ಲಿದ್ದವರು ಜುಗಾರಿ ಆಟದಲ್ಲಿ ತೊಡಗಿದ್ದರೂ ಅಲ್ಲಿಂದ ಪರಾರಿಯಾದ್ದರಿಂದ ಯಾರನ್ನೂ ಬಂಧಿಸಲಾಗಲಿಲ್ಲ.
ಘಟನಾ ಸ್ಥಳದಲ್ಲಿ ಮೋಟಾರು ಸೈಕಲ್ ಒಂದರ ಪತ್ತೆಯಾಗಿದ್ದು, ಆ ಕುರಿತು ಕಾನೂನು ಪ್ರಕ್ರಿಯೆ ಅನುಸರಿಸದ ಪಿಎಸ್‌ಐ ಕೌಶಿಕ್ ಅವರು ಬದಲಿಗೆ ಬೈಕ್ ಮಾಲಕನಿಗೆ ಕರೆಮಾಡಿ, ಠಾಣೆಗೆ ಹಾಜರಾಗುವಂತೆ ತಿಳಿಸಿದ್ದರೆನ್ನಲಾಗಿದೆ.
ಇದರಿಂದ ಕೂಡಲೇ ನಂತರ, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ವ್ಯಕ್ತಿಯ ಮೂಲಕ ಬೈಕ್ ಮಾಲಕನಿಗೆ ಹಣದ ಬೇಡಿಕೆಯಿಟ್ಟಿರುವ ಸಂಭಾಷಣೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ಆಕ್ರೋಶ ಉಂಟುಮಾಡಿದೆ.
ಈ ಮಧ್ಯೆ, ಸರಕಾರದ ಉನ್ನತ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಘಟನೆ ಬಂದಿದ್ದು, ದಿನಾಂಕ 12.05.2025 ರಂದು ಪಿಎಸ್‌ಐ ಕೌಶಿಕ್ ಬಿ.ಸಿ ಅವರ ವಿರುದ್ಧ ಇಲಾಖಾ ತನಿಖೆ ನಡೆಯುವವರೆಗೆ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Post a Comment