ಸುಬ್ರಹ್ಮಣ್ಯ ನೂಚಿಲದಲ್ಲಿ ಭೂಕುಸಿತ ಭೀತಿಯಲ್ಲಿರುವ ರಸ್ತೆ: 10 ಮನೆಗಳಿಗೆ ಸಂಪರ್ಕ ಕಡಿತಗೊಳ್ಳುವ ಆತಂಕ.


ಸುಬ್ರಹ್ಮಣ್ಯ
: ಜುಲೈ 28 — ಸುಬ್ರಹ್ಮಣ್ಯ ಗ್ರಾಮದ ನೂಚಿಲ ಪ್ರದೇಶದಲ್ಲಿ ವಾಸ್ತವ್ಯವಿರುವ ಸುಮಾರು 10 ಮನೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಪಂಚಾಯತ್ ರಸ್ತೆಯಲ್ಲಿ ಭೂಕುಸಿತ ಸಂಭವನೆಯ ಆತಂಕ ಮೂಡಿಸಿದೆ.

ರಸ್ತೆಯ ಎಡಭಾಗದಲ್ಲಿ ಸುಮಾರು 30ರಿಂದ 35 ಅಡಿ ಆಳವಿರುವ ಬರೆ ಇದ್ದು, ನಿನ್ನೆ ಸುರಿದ ಭಾರಿ ಮಳೆಗೆ ಈ ಭಾಗದಲ್ಲಿ ಭೂ ಕುಸಿತ ಉಂಟಾಗಿದೆ. ಬರೆ ಮತ್ತಷ್ಟು ಕುಸಿಯುವ ಸಂಭವವಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಭಯಭೀತರಾಗಿದ್ದಾರೆ.

ಈ ರಸ್ತೆ ಗ್ರಾಮಸ್ಥರ ಸಂಚಾರಕ್ಕೆ ಏಕೈಕ ಮಾರ್ಗವಾಗಿದ್ದು, ಭವಿಷ್ಯದಲ್ಲಿ ಇನ್ನಷ್ಟು ಮಳೆ ಸುರಿದಲ್ಲಿ ರಸ್ತೆ ಸಂಪೂರ್ಣವಾಗಿ ಕುಸಿದು ಹೋಗುವ ಸಾಧ್ಯತೆಯಿದ್ದು, ಇದರಿಂದ ನೂಚಿಲದ 10 ಮನೆಗಳು ಸಂಪರ್ಕವಿಲ್ಲದೆ ತತ್ತರಿಸಬಹುದಾದ ಸ್ಥಿತಿ ನಿರ್ಮಾಣವಾಗುತ್ತದೆ.

ಸ್ಥಳೀಯರು ಈ ಬಗ್ಗೆ ಅಧಿಕಾರಿಗಳಿಗೆ ಹಲವು ಬಾರಿ ಗಮನ ಸೆಳೆದಿದ್ದರೂ ತಾತ್ಕಾಲಿಕ ಅಥವಾ ಶಾಶ್ವತ ಪರಿಹಾರವೆಂಬುದೇ ಸಿಗದಿರುವುದು ಈ ಸಮಸ್ಯೆಯನ್ನು ಇನ್ನಷ್ಟು ಗಂಭೀರವಾಗಿಸುತ್ತದೆ.

ಅಧಿಕಾರಿಗಳ ತ್ವರಿತ ಕ್ರಮ ಅಗತ್ಯ

ಈ ರಸ್ತೆಗೆ ತಕ್ಷಣ ತಾತ್ಕಾಲಿಕ ನಿರ್ವಹಣೆ ಮತ್ತು ಭೂ ಕುಸಿತ ತಡೆಯುವ ರಕ್ಷಣಾತ್ಮಕ ಗೋಡೆ ನಿರ್ಮಾಣ ಮಾಡದಿದ್ದರೆ ದೊಡ್ಡ ವಿಪತ್ತಿಗೆ ದಾರಿ ಬಿಡುವ ಸಾಧ್ಯತೆ ಇದೆ. ಸ್ಥಳೀಯರು ಗ್ರಾಮ ಪಂಚಾಯತ್ ಹಾಗೂ ತಾಲೂಕು ಆಡಳಿತದಿಂದ ತ್ವರಿತ ಕ್ರಮದ ನಿರೀಕ್ಷೆಯಲ್ಲಿದ್ದಾರೆ.

Post a Comment

أحدث أقدم