ಸುಳ್ಯ:ಸುಳ್ಯ ಸರಕಾರಿ ತಾಲ್ಲೂಕು ಆಸ್ಪತ್ರೆಯಲ್ಲಿ 18 ವರ್ಷಗಳ ಕಾಲ ನಿಷ್ಠೆಯಿಂದ ವೈದ್ಯಕೀಯ ಸೇವೆ ಸಲ್ಲಿಸಿದ ಡಾ. ಕರುಣಾಕರ ಕೆ.ವಿ. ಅವರು ಇತ್ತೀಚೆಗಷ್ಟೇ ಪುತ್ತೂರು ಸರಕಾರಿ ಆಸ್ಪತ್ರೆಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ, ಜುಲೈ 14ರಂದು ಆರೋಗ್ಯರಕ್ಷಾ ಸಮಿತಿ ಮತ್ತು ಆಸ್ಪತ್ರೆಯ ಸಿಬ್ಬಂದಿಗಳ ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಈ ಕಾರ್ಯಕ್ರಮದಲ್ಲಿ ಸುಳ್ಯ ಶಾಸಕಿಯರಾದ ಭಾಗೀರಥಿ ಮುರುಳ್ಯ ಅವರು ಉಪಸ್ಥಿತರಿದ್ದು, ಡಾ. ಕರುಣಾಕರ್ ಕೆ.ವಿ. ಅವರಿಗೆ ಸಾರ್ವಜನಿಕವಾಗಿ ಸಾಧಿಸಿದ ಸೇವೆಗಾಗಿ ಕೃತಜ್ಞತೆ ಸಲ್ಲಿಸಿದರು.
ಅವರು ತಮ್ಮ ಭಾಷಣದಲ್ಲಿ, “ಡಾ. ಕರುಣಾಕರ್ ಅವರು ಸುಳ್ಯದ ಆರೋಗ್ಯ ಸೇವೆಗೆ ನೀಡಿದ ಕೊಡುಗೆ ಸದಾ ನೆನಪಿನಲ್ಲಿ ಉಳಿಯಲಿದೆ. ಅವರ ಸೇವಾ ಮನೋಭಾವನೆ ಇತರರಿಗೆ ಮಾದರಿಯಾಗಿದೆ,” ಎಂದು ಹೇಳಿದರು.
ಸಿಬ್ಬಂದಿಗಳು, ಸಹ ವೈದ್ಯರು ಹಾಗೂ ಸಾರ್ವಜನಿಕರು ಈ ಸಂದರ್ಭ ಉಪಸ್ಥಿತರಾಗಿದ್ದು, ಅವರೊಂದಿಗೆ ಡಾ. ಕರುಣಾಕರ್ ಅವರು ಕಳೆದ ದಶಕದ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಕೊನೆಯಲ್ಲಿ ಗೌರವಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು.
Post a Comment