"ಬೊಲ್ಲಗುಡ್ಡ ರೋಶನ್ ಸಲ್ಡಾನ ಅಡಡ್ಡಿಗೆ ಮಂಗಳೂರು ಪೊಲೀಸರ ದಾಳಿ!" -ಇದೀಗ ನ್ಯಾಯಾಂಗ ಬಂಧನ.



ಮಂಗಳೂರು, ಜುಲೈ 19: ಹಲವು ರಾಜ್ಯಗಳ ಉದ್ಯಮಿಗಳಿಗೆ ಸಾಲ ಕೊಡುವ ನಿಟ್ಟಿನಲ್ಲಿ ನಂಬಿಕೆ ಹುಟ್ಟುಹಾಕಿ ಕೋಟಿಗಟ್ಟಲೆ ಹಣ ಪಡೆದು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ನಗರ ಸೆನ್ ಕ್ರೈಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

ಬಂಧಿತನನ್ನು ಮಂಗಳೂರು ನಗರ ಕಂಕನಾಡಿಯ ಬಜಾಲ್ ಪ್ರದೇಶದ ಬೊಲ್ಲಗುಡ್ಡ ನಿವಾಸಿ ರೋಶನ್ ಸಲ್ಡಾನ (ವಯಸ್ಸು: 43, ತಂದೆ: ಲೇ. ಜಾನ್ ಸಲ್ಡಾನ) ಎಂದು ಗುರುತಿಸಲಾಗಿದೆ.

ದಾಖಲಾದ ಪ್ರಕರಣಗಳು:
ಮಂಗಳೂರು ಸೆನ್ ಕ್ರೈಂ ಠಾಣೆಯಲ್ಲಿ ಅಪರಾಧ ಕ್ರಮಾಂಕ 22/2025 ಹಾಗೂ 30/2025 ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯ 316(2), 316(5), 318(2), 318(3), 61(2) ಹಾಗೂ 3(5) ಕಲಂಗಳು ಅನ್ವಯಿಸಿ ಪ್ರಕರಣ ದಾಖಲಾಗಿದೆ.


ಆರೋಪಗಳ ಸಾರಾಂಶ:
ದಿನಾಂಕ 16 ಮತ್ತು 17 ಜುಲೈ 2025 ರಂದು ಮಹಾರಾಷ್ಟ್ರದ ಉದ್ಯಮಿಯೊಬ್ಬರು ₹5 ಕೋಟಿ,
ಅಸ್ಸಾಂ ಮೂಲದ ಮತ್ತೊಬ್ಬರು ₹20 ಲಕ್ಷ ಹಣವನ್ನು ಬ್ಯಾಂಕ್ ಮುಖಾಂತರ ರೋಶನ್ ಸಲ್ಡಾನನ ಖಾತೆಗೆ ವರ್ಗಾಯಿಸಿದ್ದರು.

ಮಂಗಳೂರು ಸೆನ್ ಕ್ರೈಂ ಪೊಲೀಸರಿಂದ ತಕ್ಷಣದ ಕ್ರಮ ಕೈಗೊಳ್ಳಲ್ಪಟ್ಟು, ₹3.5 ಕೋಟಿ ಹಾಗೂ ₹20 ಲಕ್ಷ ಹಣವನ್ನು ಬ್ಯಾಂಕ್ ಖಾತೆಗಳಲ್ಲಿ ಪ್ರೀಜ್ ಮಾಡಲಾಗಿದೆ.


ಮನೆ ಪರಿಶೀಲನೆ ಹಾಗೂ ವಶಪಡಿಕೆ:
ದಿನಾಂಕ 17-07-2025 ರಂದು ಆರೋಪಿತನು ತನ್ನ ನಿವಾಸದಲ್ಲಿರುವ ಮಾಹಿತಿ ಆಧರಿಸಿ ಸೆನ್ ಕ್ರೈಂ ಪೊಲೀಸರು ದಾಳಿ ನಡೆಸಿ ಅಡಗುತಾಣದಿಂದ

₹6,72,947 ಮೌಲ್ಯದ ದೇಶಿ-ವಿದೇಶಿ ಮದ್ಯ,
667 ಗ್ರಾಂ ಚಿನ್ನಾಭರಣಗಳು,
ಅಂದಾಜು ₹2.75 ಕೋಟಿ ಮೌಲ್ಯದ ವಜ್ರದ ಉಂಗುರ,
ವಿವಿಧ ದಾಖಲೆಗಳು, ಖಾಲಿ ಚೆಕ್‌ಗಳು
ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಅಪರಾಧ ಕ್ರಮಾಂಕ 39/2025 ಅಡಿಯಲ್ಲಿ ಅಬಕಾರಿ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ.


ಹಳೆಯ ಪ್ರಕರಣಗಳು ಹಾಗೂ ವ್ಯಾಪ್ತಿ:
ರೋಶನ್ ಸಲ್ಡಾನನ ವಿರುದ್ಧ ಚಿತ್ರದುರ್ಗ, ಮುಂಬೈ ಸೇರಿದಂತೆ ಹಲವೆಡೆ ವಂಚನೆ ಪ್ರಕರಣಗಳು ದಾಖಲಾಗಿವೆ.

ಕಳೆದ ಮೂರು ತಿಂಗಳಲ್ಲಿ ಈತನು ಗೋವಾ, ಬೆಂಗಳೂರು, ಪುಣೆ, ವಿಜಯಪುರ, ತುಮಕೂರು, ಕಲ್ಕತ್ತಾ, ಸಾಂಗ್ಲಿ, ಲಕ್ನೋ, ಬಾಗಲಕೋಟೆ ಸೇರಿದಂತೆ ವಿವಿಧೆಡೆ ಉದ್ಯಮಿಗಳಿಗೆ ಸಾಲ ನೀಡುವ ನೆಪದಲ್ಲಿ ಅಂದಾಜು ₹32 ಕೋಟಿ ಹಣ ಪಡೆಯಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.


ನ್ಯಾಯಾಲಯಕ್ಕೆ ಹಾಜರು:
ಈ ದಿನ ಆರೋಪಿತನನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ತನಿಖೆ ಮುಂದುವರಿದಿದೆ.

ಸಾರ್ವಜನಿಕರಿಗೆ ಎಚ್ಚರಿಕೆ:
ಸಾಲದ ಆಮಿಷದಲ್ಲಿ ಗುರುತಿಸದ ವ್ಯಕ್ತಿಗಳಿಗೆ ಹಣ ಪಾವತಿಸುವ ಮುನ್ನ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ನಂಬಿಗಸ್ತ ಮೂಲಗಳಿಂದ ಮಾತ್ರ ವ್ಯವಹಾರ ನಡೆಸಲು ಮಂಗಳೂರು ನಗರ ಪೊಲೀಸರು ಕರೆ ನೀಡಿದ್ದಾರೆ.

Post a Comment

Previous Post Next Post