"ಶಕ್ತಿ ಯೋಜನೆಯಿಂದ 500 ಕೋಟಿ ಮಹಿಳೆಯರಿಗೆ ಪ್ರಯೋಜನ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಂಭ್ರಮ ಆಚರಣೆ"


ಕುಕ್ಕೆ ಸುಬ್ರಹ್ಮಣ್ಯ
, ಜುಲೈ 14 (newspad):
ಕರ್ನಾಟಕ ಸರ್ಕಾರದ ಮಹಿಳಾ ಸಬಲೀಕರಣದ ಉದ್ದೇಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ರೂಪಿಸಲಾದ ಬಹು ನಿರೀಕ್ಷಿತ 'ಶಕ್ತಿ ಯೋಜನೆ' ಇದೀಗ ಇತಿಹಾಸ ನಿರ್ಮಿಸಿದೆ. ರಾಜ್ಯದಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ನೀಡುವ ಮೂಲಕ ಲಕ್ಷಾಂತರ ಮಹಿಳೆಯರ ದೈನಂದಿನ ಜೀವನದ ಸ್ಥಿತಿಗತಿಯಲ್ಲಿ ಬದಲಾವಣೆ ತರಲು ನೆರವಾಗಿರುವ ಈ ಯೋಜನೆಯು 500 ಕೋಟಿ ಪ್ರಯಾಣಗಳ ಗಡಿಯನ್ನು ದಾಟಿದ ಹಿನ್ನೆಲೆ — ಇತಿಹಾಸವನ್ನು ಸ್ಮರಿಸಲು ಹಾಗೂ ಸಾಧನೆಗೆ ಕೃತಜ್ಞತೆ ಸಲ್ಲಿಸಲು 'ಶಕ್ತಿ ಸಂಭ್ರಮಾಚರಣೆ' ಕಾರ್ಯಕ್ರಮ ಜುಲೈ 14ರಂದು ಬೆಳಿಗ್ಗೆ 10.30ಕ್ಕೆ ಕುಕ್ಕೆ ಸುಬ್ರಹ್ಮಣ್ಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಆಯೋಜಿಸಲಾಗಿದೆ.

ಈ ಕಾರ್ಯಕ್ರಮವು ಕಡಬ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಶ್ರೀ ಸುಧೀರ್ ಕುಮಾರ್ ಶೆಟ್ಟಿ ಹಾಗೂ ಸಮಿತಿಯ ಸರ್ವ ಸದಸ್ಯರ ನೇತೃತ್ವದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ನಾಮನಿರ್ದೇಶಿತ ಸದಸ್ಯರು, ಹಿರಿಯ-ಕಿರಿಯ ರಾಜಕೀಯ ಮುಖಂಡರು ಹಾಗೂ ಶಕ್ತಿ ಯೋಜನೆಯ ನೂರಾರು ಪಲಾನುಭವಿಗಳು ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ.

ಶಕ್ತಿ ಯೋಜನೆಯ ವಿಶೇಷತೆ:
ರಾಜ್ಯವ್ಯಾಪಿ ಸರಕಾರಿ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ನೀಡಿರುವ ಈ ಯೋಜನೆಯು ಜನಸಾಮಾನ್ಯರ ಖರ್ಚನ್ನು ಕಡಿಮೆ ಮಾಡುವ ಮೂಲಕ ಸಾಮಾಜಿಕ ಸಬಲೀಕರಣಕ್ಕೆ ಹೊಸ ಅರ್ಥ ನೀಡಿದೆ. ಈ ಯೋಜನೆಯಡಿಯಲ್ಲಿ ಗ್ರಾಮೀಣ ಪ್ರದೇಶದ ಮಹಿಳೆಯರಿಂದ ನಗರ ಪ್ರದೇಶದ ಉದ್ಯೋಗಿ ಮಹಿಳೆಯರವರೆಗೆ ಎಲ್ಲರಿಗೂ ಅನುಕೂಲವಾಗುತ್ತಿರುವುದು ಗಮನಾರ್ಹ.

ಕಾರ್ಯಕ್ರಮದ ಉದ್ದೇಶ:
ಈ ಸಂಭ್ರಮಾಚರಣೆ ಗೌರವದ ಕ್ಷಣವಲ್ಲ. ಇದು ಸರ್ಕಾರದ ಸಾಮಾಜಿಕ ಬದ್ಧತೆಯ ಪ್ರತೀಕವಾಗಿ, ಜನತೆ ಹಾಗೂ ಯೋಜನಾ ಅನುಷ್ಠಾನ ಘಟಕಗಳ ಒಗ್ಗಟ್ಟನ್ನು ತೋರಿಸುವ ಹಬ್ಬವಾಗಿದೆ. ಪ್ರತಿ ಮಹಿಳೆಯ ಮುಖದಲ್ಲಿನ ನಗು, ಈ ಯೋಜನೆಯ ಯಶಸ್ಸಿನ ಜೀವಾಳವಾಗಿದೆ.

ಸಮಿತಿಯ ಕರೆ:
ಕಡಬ ತಾಲೂಕಿನ ಎಲ್ಲ ಗ್ಯಾರಂಟಿ ಯೋಜನೆಗಳ ಕಾರ್ಯಕರ್ತರು, ಸಮಿತಿಯ ಸದಸ್ಯರು, ಹಾಗೂ ಸಾಮಾನ್ಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಸಮಿತಿಯ ವತಿಯಿಂದ ವಿನಂತಿಸಲಾಗಿದೆ.




Post a Comment

Previous Post Next Post