ದೇವರಗದ್ದೆ ಅಗರಿಕಜೆ ದೈವಸ್ಥಾನದ ಮುಂಭಾಗದ ಕಾಂಕ್ರೀಟ್ ರಸ್ತೆಯ ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಅಧ್ಯಕ್ಷರಿಂದ ಉದ್ಘಾಟನೆ.

ಸುಬ್ರಹ್ಮಣ್ಯ, ಜುಲೈ 21:
ದೇವರಗದ್ದೆ ಅಗರಿಕಜೆ ಎಂಬಲ್ಲಿ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ಮತ್ತು ಶ್ರೀ ಸ್ವಾಮಿ ಕೊರಗಜ್ಜ ದೈವಸ್ಥಾನದ ಮುಂಭಾಗದ ನೂತನ ಕಾಂಕ್ರೀಟ್ ರಸ್ತೆ ಇಂದು (ಜು.21, ಸೋಮವಾರ) ಬೆಳಿಗ್ಗೆ 9.00ಕ್ಕೆ ಉದ್ಘಾಟನೆಯಾಯಿತು.
ಈ ಕಾರ್ಯಕ್ರಮವನ್ನು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀಯುತ ಹರೀಶ್ ಎಸ್. ಇಂಜಾಡಿ ಅವರು ಉದ್ಘಾಟಿಸಿದರು.


ಈ ನೂತನ ರಸ್ತೆಯ ನಿರ್ಮಾಣಕ್ಕೆ ಶ್ರಮವಹಿಸಿ ಯೋಜನೆಗೆ ಮಾರ್ಗದರ್ಶನ ನೀಡಿದ ಹರೀಶ್ ಇಂಜಾಡಿ ಹಾಗೂ  ವ್ಯವಸ್ಥಾಪನ ಸಮಿತಿ ಸದಸ್ಯೆ ಶ್ರೀಮತಿ ಸೌಮ್ಯ ಬಿ.ಕೆ.ಇವರಿಗೆ ಸುಬ್ರಮಣ್ಯ ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಸಮಯದಲ್ಲಿ ಈ ರಸ್ತೆಯ ಅಭಿವೃದ್ಧಿಗೆ ಶ್ರಮಿಸಿದ ಈಗಿನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಿಗೆ ಹಾಗೂ ವ್ಯವಸ್ಥಾಪನ ಸಮಿತಿ ಸದಸ್ಯೆ ಅವರಿಗೆ ಗ್ರಾಮಸ್ಥರಿಂದ ಹಾಗೂ ದೈವಸ್ಥಾನದ ಪರವಾಗಿ ತುಂಬು ಹೃದಯದ ಧನ್ಯವಾದಗಳು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಮಾಸ್ಟರ್ ಪ್ಲಾನ್ ಸದಸ್ಯ ಪವನ್, ಲೋಲಾಕ್ಷ ಕೈಕಂಬ, ಕೆಡಿಪಿ ಸದಸ್ಯ ಶಿವರಾಮ್ ರೈ, ಮಾಜಿ ವ್ಯವಸ್ಥಾಪನ ಸಮಿತಿ ಸದಸ್ಯ ಕೃಷ್ಣಮೂರ್ತಿ, ಮಾಧವ, ಸ್ಥಳೀಯರಾದ ಕಿಶೋರ್ ಆರಂಪಾಡಿ, ಸುರೇಶ್ ಭಟ್, ದೀಪಕ್ ನಂಬಿಯಾರ್,
ಸ್ಥಳೀಯ ಭಕ್ತರು, ಗ್ರಾಮಸ್ಥರು ಹಾಗೂ ದೈವಸ್ಥಾನದ ಕಾರ್ಮಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Post a Comment

Previous Post Next Post