ಕುಕ್ಕೆ ಸುಬ್ರಮಣ್ಯ ಆಂಬುಲೆನ್ಸ್ ಡ್ರೈವರ್ ನಾಪತ್ತೆ ಪ್ರಕರಣ;ಹೊನ್ನಪ್ಪ ಗೌಡರ ಮೃತದೇಹ ಪತ್ತೆ:

ಸುಬ್ರಹ್ಮಣ್ಯ, ಜುಲೈ 25:
ಕೊನೆಯ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಆಂಬುಲೆನ್ಸ್ ಚಾಲಕ ಕೆ. ಹೊನ್ನಪ್ಪ ಗೌಡ (52) ಅವರ ಮೃತದೇಹವು ಇಂದು (ಜುಲೈ 25) ಕುಮಾರಧಾರ ನದಿಯಿಂದ ಸುಮಾರು 2 ಕಿಮೀ ದೂರ ನದಿಯ ಬದಿಯಲ್ಲಿ ಗಿಡಗಳ ಮಧ್ಯೆ ಪತ್ತೆಯಾಗಿದೆ.

ಶೋಧ ಕಾರ್ಯಕ್ಕೆ ಸಹಾಯವಾಗಿ SDRF (State Disaster Response Force) ತಂಡ, ಮುಳುಗು ತಜ್ಞ ಈಶ್ವರ ಮಲ್ಪೆ, ಸಮಾಜಸೇವಕ ರವಿಕಕ್ಕೆಪದವು ಹಾಗೂ ಗ್ರಾಮಸ್ಥರು ಹಾಗೂ ಹಲವಾರು ಸಂಘ ಸಂಸ್ಥೆಗಳೊಂದಿಗೆ ಕಳೆದ 48 ಗಂಟೆಗಳ ಕಾಲ ನಿರಂತರ ಶ್ರಮವಹಿಸಿ, ಕೊನೆಗೂ ದೇಹವನ್ನು ನದಿಯ ತೀರದಲ್ಲಿ ಪತ್ತೆಹಚ್ಚಿದ್ದಾರೆ.

ಈ ಘಟನೆ ಬಗ್ಗೆ ಪೂರ್ಣ ಮಾಹಿತಿ ಪೊಲೀಸ್ ತನಿಕೆಯಿಂದ ತಿಳಿಯಬೇಕಿದೆ.

Post a Comment

أحدث أقدم