ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಇಂದು ಎಡನೀರು ಮಠದ ಶ್ರೀಗಳವರು ಧರ್ಮಿಕ ಭೇಟಿ ನೀಡಿದ ಸಂದರ್ಭದಲ್ಲಿ, ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿರುವ ಹರೀಶ್ ಇಂಜಾಡಿ ಅವರು ಶ್ರೀಗಳ ಸಾನ್ನಿಧ್ಯಕ್ಕೆ ಹಾಜರಾಗಿ, ಆತ್ಮೀಯವಾಗಿ ಸ್ವಾಗತಿಸಿದರು ಮತ್ತು ಆಶೀರ್ವಾದವನ್ನು ಪಡೆದು, ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಿದರು.
ಶ್ರೀಗಳ ಭೇಟಿಯು ಕುಕ್ಕೆ ಶ್ರೀ ಕ್ಷೇತ್ರದ ಹಿರಿಯ ಧಾರ್ಮಿಕ ಮುಂದಾಳು
ಯಜ್ಞೇಶ ಆಚಾರ್ ಅವರ ನಿವಾಸದಲ್ಲಿ ನಡೆಯಿತು. ಅಧ್ಯಕ್ಷರಾದ ಹರೀಶ್ ಇಂಜಾಡಿ ಅವರು ದೇವಾಲಯದ ಮುನ್ನಡೆ, ಭಕ್ತರಿಗೆ ಉತ್ತಮ ಸೌಲಭ್ಯ, ಹಾಗೂ ಮೂಲಸೌಕರ್ಯಗಳ ಬಗ್ಗೆ ವಿವರಣೆ ನೀಡಿ, ಮುಂದಿನ ಯೋಜನೆಗಳ ಬಗ್ಗೆ ಶ್ರೀಗಳಿಂದ ಮಾರ್ಗದರ್ಶನವನ್ನೂ ಕೇಳಿದರು.
ಹರೀಶ್ ಇಂಜಾಡಿ ಅವರು ಕ್ಷೇತ್ರದ ಹಿತದೃಷ್ಟಿಯಿಂದ ಸದಾ ಚಿಂತೆ ಮಾಡುತ್ತಿರುವ ಉತ್ಸಾಹಿ ನಾಯಕ. ಶ್ರೀಗಳ ದರ್ಶನ ಪಡೆದ ಬಳಿಕ ಅವರು ಹೇಳಿದ್ದಾರೆ:
"ಕ್ಷೇತ್ರವು ಇನ್ನಷ್ಟು ಉನ್ನತ ಮಟ್ಟದಲ್ಲಿ ಅಭಿವೃದ್ಧಿಯಾಗಬೇಕೆಂಬುದು ನಮ್ಮ ಆಶಯ. ಶ್ರೀಗಳ ಆಶೀರ್ವಾದ ನಮ್ಮ ಪ್ರಯತ್ನಗಳಿಗೆ ಶಕ್ತಿ ನೀಡುತ್ತದೆ."
ಎಂದು ಹೇಳಿದರು.
Post a Comment