ಪಟ್ಲಡ್ಕ ಶ್ರೀ ಗಡಿಯಾಡಿ ಆದಿಮೋಗೆರ್ಕಳ ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ಶ್ರೀ ಕೃಷ್ಣಾಷ್ಠಮಿ ಆಚರಣೆ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದ್ದು ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಶ್ರೀ ಕ್ಷೇತ್ರದಲ್ಲಿ ನಡೆಯಿತು. ದೈವನರ್ತಕ ಜಯರಾಮ್ ನಲಿಕೆ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು, ಈ ಸಂದರ್ಭದಲ್ಲಿ ಅಷ್ಟಮಿ ಆಚರಣಾ ಸಮಿತಿಯ ಗೌರವಅಧ್ಯಕ್ಷ ಹರೀಶ್ ಪಿ, ಅಧ್ಯಕ್ಷ ಮಹೇಶ್ ಪಿ, ಉಪಾಧ್ಯಕ್ಷ ಚಂದ್ರ ಪಟ್ಲಡ್ಕ, ಕಾರ್ಯದರ್ಶಿ ಸತೀಶ್ ಎಸ್, ಜೊತೆ ಕಾರ್ಯದರ್ಶಿ ಪ್ರಶಾಂತ್ ಪಟ್ಲಡ್ಕ, ಕೋಶಾಧಿಕಾರಿ ಪ್ರಕಾಶ್ ರಾವ್, ಚಾಮುಂಡೇಶ್ವರಿ ಭಜನಾ ಮಂಡಳಿ ಅಧ್ಯಕ್ಷರು ಗೀತಾ ನೆಲ್ಯಡ್ಕ, ಗಡಿಯಾ ಡಿ ಆದಿಮೋಗೆರ್ಕಳ ಸ್ವಾಮಿ ಕೊರಗಜ್ಜ ದೈವಸ್ಥಾನದ ಆಡಳಿತ ಮಂಡಳಿಪ್ರಧಾನ ಕಾರ್ಯದರ್ಶಿ ದೀಕ್ಷಾ ಸಾಲಿಯಾನ್, ಕೃಷ್ಣ ಜನ್ಮಾಷ್ಠಮಿ ಆಚರಣಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ದಿನಾಂಕ 15.8.2025 ರಂದು ಜನ್ಮಾಷ್ಠಮಿಯ ಆಚರಣೆ ನಡೆಯಲಿದ್ದು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ಪಟ್ಲಡ್ಕ ಗಡಿಯಾಡಿ ಆದಿ ಮೊಗೇರ್ಕಳ ಕ್ಷೇತ್ರದ ಅಧ್ಯಕ್ಷ ತುಕ್ರಪ್ಪ ಶೆಟ್ಟಿ ನೂಜೆ ಸಭಾಧ್ಯಕ್ಷತೆ ವಹಿಸಲಿದ್ದು, ಚಾಮುಂಡೇಶ್ವರಿ ಭಜನಾ ಮಂಡಳಿಯ ಅಧ್ಯಕ್ಷರು ಶ್ರೀಮತಿ ಗೀತಾ ನೆಲ್ಯಡ್ಕ ದೀಪ ಪ್ರಜ್ವಲನೆ ಮಾಡಲಿದ್ದು, ಶ್ರೀ ಕ್ಷೇತ್ರ ಸೌತಡ್ಕ ವ್ಯವಸ್ಥಾಪನ ಸಮಿತಿಯ ಸದಸ್ಯ ಶ್ರೀ ಗಣೇಶ್ ಕಾಶಿ ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ. ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಜನ್ಮಾಷ್ಟಮಿ ಆಚರಣೆ ಸಮಿತಿಯ ಅಧ್ಯಕ್ಷ ಮಹೇಶ್ ಪಿ ಸಭಾಧ್ಯಕ್ಷತೆ ವಹಿಸಲಿದ್ದು,ಮುಖ್ಯ ಅತಿಥಿಗಳಾಗಿ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ವಿಶ್ವನಾಥ ಕೊಲ್ಲಾಜೆ,ನವೀನ್ ನೆರಿಯಾ, ರವಿಚಂದ್ರ ಪಡುಬೆಟ್ಟು,ನವೀನ್ ಶ್ರೀ ಕಟೀಲ್, ಗುರು ಎಂ. ಪಿ ಅರಸಿನಮಕ್ಕಿ,ಕೌಕ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ್ ಕುಮಾರ್ ದೊಂತಿಲ, ವಂದನ್ ಕುಮಾರ್ ಹೊಸಮಜಲು ಭಾಗವಹಿಸಲಿರುವರು.
إرسال تعليق