ಅತ್ಯಾಚಾರ ಪ್ರಕರಣದ ಆರೋಪಿಗೆ ಶಿಕ್ಷೆ ಪ್ರಕಟ.

ಪುತ್ತೂರು: 2018ರಲ್ಲಿ ದಾಖಲಾಗಿದ್ದ ಅತ್ಯಾಚಾರ ಮತ್ತು ಪೋಕ್ಸೋ ಪ್ರಕರಣದಲ್ಲಿ ಆರೋಪಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಶಿಕ್ಷೆ ಘೋಷಿಸಿದೆ.

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 16/2018 ರಂತೆ ದಾಖಲಾಗಿದ್ದ ಪ್ರಕರಣದಲ್ಲಿ ಪಿರೇಶ್ @ ಪಿರೇಪ್ಪ ಸಂಗಪ್ಪ ಮಲ್ಲೋತ್ತರ ಎಂಬಾತನಿಗೆ ಈ ತೀರ್ಪು ಪ್ರಕಟವಾಗಿದೆ. ಪ್ರಕರಣದಲ್ಲಿ ಆಪಾದನೆಗಳ ಕುರಿತು ಸಾಕ್ಷ್ಯಗಳ ಆಧಾರದ ಮೇಲೆ ನ್ಯಾಯಾಲಯವು ಆರೋಪಿಗೆ ವಿವಿಧ ಕಾನೂನು ಕಲಂಗಳಡಿ ಶಿಕ್ಷೆ ವಿಧಿಸಿದೆ.

ನ್ಯಾಯಾಲಯದ ತೀರ್ಪಿನ ವಿವರಗಳು ಹೀಗಿವೆ:
ಐಪಿಸಿ ಸೆಕ್ಷನ್ 376(2)(j)(n): 10 ವರ್ಷಗಳ ಸರಳ ಕಾರಾವಾಸ ಹಾಗೂ ₹20,000 ದಂಡ
ಐಪಿಸಿ ಸೆಕ್ಷನ್ 506: 3 ತಿಂಗಳು ಸರಳ ಶಿಕ್ಷೆ ಹಾಗೂ ₹5,000 ದಂಡ
ಪೋಕ್ಸೋ ಕಾಯ್ದೆ ಸೆಕ್ಷನ್ 6: 10 ವರ್ಷಗಳ ಸರಳ ಶಿಕ್ಷೆ ಹಾಗೂ ₹10,000 ದಂಡ

ಈ ಪ್ರಕರಣದ ತನಿಖೆಯನ್ನು ಆಗಿನ ಪುತ್ತೂರು ಉಪವಿಭಾಗದ ಉಪ ಪೊಲೀಸ್ ಅಧೀಕ್ಷಕರಾಗಿದ್ದ ಶ್ರೀನಿವಾಸ್ ಬಿ.ಎಸ್. ಅವರು ನಡೆಸಿದ್ದರು. ಅಲ್ಲದೇ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಪುಷ್ಪರಾಜ್ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿದರು.

ನ್ಯಾಯಾಲಯದ ಈ ತೀರ್ಪು, ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ ವಿರುದ್ಧ ಕಠಿಣ ಸಂದೇಶ ನೀಡಿದೆ.

Post a Comment

أحدث أقدم