ಹರಿಹರ ತಾಲೂಕಿನ ಕಜ್ಜೋಡಿ ಕ್ರಾಸ್ ಬಳಿ ಇಂದು ಬೆಳಿಗ್ಗೆ ಪೈಪ್ ಲೈನ್ ಗೆ ಬಿದ್ದ ಬಸ್‌ವೊಂದು ಟಯರ್ ಹೂತು ಹೋಗಿ ರಸ್ತೆಯಲ್ಲೇ ಬಾಕಿಯಾದ ಘಟನೆ ವರದಿಯಾಗಿದೆ. ಸುಬ್ರಹ್ಮಣ್ಯದಿಂದ ಹರಿಹರ ಮಾರ್ಗವಾಗಿ ಕೊಲ್ಲಮೊಗ್ರು ಕಡೆಗೆ ಚಲಿಸುತ್ತಿದ್ದ ಖಾಸಗಿ ಬಸ್, ವೇನ್‌ಗೆ ಸೈಡ್ ನೀಡುವಾಗ ರಸ್ತೆ ಬದಿಯಲ್ಲಿದ್ದ ಕುಡಿಯುವ ನೀರು ಯೋಜನೆಯ ಗಂಭೀರ ಸಮಸ್ಯೆಯಾಗಿದೆ.
ಬಸ್ ಚಾಲಕನಿಗೆ ಪೈಪ್ ಲೈನ್ ಇರುವ ಮಾಹಿತಿ ಇಲ್ಲದ ಕಾರಣ, ರಸ್ತೆ ಬದಿಗೆ ಚಲಿಸಿದಾಗ ಬಸ್‌ನ ಟಯರ್ ಪೈಪ್ ಲೈನ್‌ನ ಮೃದು ಮಣ್ಣಿನಲ್ಲಿ ಹೂತು ಬಾಕಿಯಾಗಿ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಜನರಿಗು ತೊಂದರೆ ಉಂಟಾಯಿತು. ಪರಿಣಾಮವಾಗಿ ಟ್ರಾಫಿಕ್‌ಗೂ ವ್ಯತ್ಯಯ ಉಂಟಾಯಿತು.
ಇದು ಯಾವುದೇ ಅಪರೂಪದ ಘಟನೆ ಅಲ್ಲ. ಕಳೆದ ಕೆಲ ದಿನಗಳಿಂದ ಹರಿಹರ-ಕೊಲ್ಲಮೊಗ್ರು ಮಾರ್ಗದಲ್ಲಿ ಇಂತಹ ಸಮಸ್ಯೆಗಳು ಪದೇಪದೇ ಸಂಭವಿಸುತ್ತಿದ್ದು, ಜುಲೈ 4ರಂದು ಕೊಲ್ಲಮೊಗ್ರದ ಕಟ್ಡ ಕ್ರಾಸ್ ಬಳಿ ಮತ್ತೊಂದು ಬಸ್ ಹೂತು ಬಾಕಿಯಾಗಿತ್ತು. ಕಳೆದ ವಾರವೂ ಈ ಭಾಗದಲ್ಲಿ ಹಲವು ವಾಹನಗಳು ಪೈಪ್ ಲೈನ್ ಕಾಮಗಾರಿ ನಡೆದಿರುವ ಸ್ಥಳಗಳಲ್ಲಿ ಹೂತು ಬಾಕಿಯಾಗಿರುವ ಘಟನೆಗಳು ನಡೆದಿದೆ.
ಸ್ಥಳೀಯರು, ನಿರ್ದಿಷ್ಟ ಸೂಚನೆಗಳು ಇಲ್ಲದೆ ಪೈಪ್ ಲೈನ್ ಕಾಮಗಾರಿಗಳನ್ನು ಮುಗಿಸಿದ್ದರಿಂದ, ರಸ್ತೆ ಸುರಕ್ಷತೆ ಕುರಿತಾಗಿ ಗಮನಹರಿಸುವಂತೆ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ವಾಹನ ಸವಾರರಿಗೆ ದಿನನಿತ್ಯದ ಸಮಸ್ಯೆಯಾಗಿರುವ ಈ ಸ್ಥಿತಿಗೆ ಶೀಘ್ರ ಪರಿಹಾರ ದೊರೆಯಬೇಕೆಂಬುದು ಸಾರ್ವಜನಿಕರ ಆಶಯವಾಗಿದೆ.
Post a Comment