ಉಪ್ಪಿನಂಗಡಿ: ಜೇಸಿಐ ಸಾಮಾನ್ಯ ಸಭೆ, ತರಬೇತಿ ಮತ್ತು ವೈದ್ಯರ ದಿನಾಚರಣೆ.

ಉಪ್ಪಿನಂಗಡಿ: ಜೇಸಿಐ ಉಪ್ಪಿನಂಗಡಿ ಘಟಕದ ಸಾಮಾನ್ಯ ಸಭೆ ನಡೆಯಿತು.ಈ ಸಂದರ್ಭದಲ್ಲಿ ಘಟಕದ ಜೇಸಿಐ ಸದಸ್ಯರಿಗೆ "ಮಾತು ಮಾಣಿಕ್ಯ" ಅನ್ನುವ ವಿಷಯದ ಮೇಲೆ ವಲಯ ತರಬೇತುದಾರರಾದ ಜೇಸಿ ಡಾ.ಗೋವಿಂದ ಪ್ರಸಾದ್ ಕಜೆ ತರಬೇತಿ ನಡೆಸಿ ಕೊಟ್ಟರು.ಇನ್ನೂ ವೈದ್ಯರ ದಿನಾಚರಣೆ ಅಂಗವಾಗಿ ಜೇಸಿ ಮೋಹನ್ ಚಂದ್ರ ತೋಟದ ಮನೆ "ವೈದ್ಯರ ದಿನಾಚರಣೆ"ಯ ಮಹತ್ವದ ಕುರಿತು ಮಾತನಾಡಿದರು.
ತದ ನಂತರ ದಿನಾಚರಣೆ ಪ್ರಯುಕ್ತ ಕೇಕ್ ಕತ್ತರಿಸಿ,ಘಟಕದ ಪೂರ್ವಾಧ್ಯಕ್ಷರು ಮತ್ತು ವೈದ್ಯರಾಗಿ ವೃತ್ತಿ ಸೇವೆ ನೀಡುತ್ತಿರುವ ಜೇಸಿ ಡಾ.ರಾಜಾರಾಂ, ಜೇಸಿ ಡಾ.ಗೋವಿಂದ ಪ್ರಸಾದ್ ಕಜೆ, ಜೇಸಿ ಡಾ.ಶಿವರಾಮ್ ಪನ್ಯ ಮತ್ತು ಜೇಸಿ ಡಾ.ಆದಮ್ ಶಾಕಿರ್ ಶೂಯೇಬ್ ಅವರನ್ನು ಗೌರವಿಸಲಾಯಿತು.
ಪೂರ್ವಾಧ್ಯಕ್ಷರು ಮತ್ತು ಜೇಸಿಐ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಜೇಸಿ ಪ್ರಶಾಂತ್ ಕುಮಾರ್ ರೈ ರಕ್ತದಾನ ಶಿಬಿರ ಆಯೋಜನೆ ಕುರಿತು ಮಾಹಿತಿ ನೀಡಿದರು.ಘಟಕದ ಉಪಾಧ್ಯಕ್ಷ ಜೇಸಿ ಸುರೇಶ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ಜೇಸಿ ಮಹೇಶ್ ಖಂಡಿಗ ಗತ ಸಭೆಯ ವರದಿ ಮಂಡಿಸಿದರು.ನಿಕಟಪೂರ್ವ ಅಧ್ಯಕ್ಷರಾದ ಜೇಸಿ ಲವೀನಾ ಪೀಂಟೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಜೇಸಿ ಅತುಲ್ ಕಶ್ಯಪ್ ತಾಳ್ತಜೆ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು.ಜೇಸಿ ಡಾ.ಶಿವರಾಮ್ ಪನ್ಯ ವಂದನಾರ್ಪಣೆ ಗೈದರು.ಪೂರ್ವಾಧ್ಯಕ್ಷ ಕೆ.ವಿ.ಕುಲಾಲ್, ಜೇಸಿ ಆನಂದ ರಾಮಕುಂಜ, ಜೇಸಿ ಶೇಖರ್ ಗೌಂಡತ್ತಿಗೆ ಮತ್ತು ಜೆಜೆಸಿ ಅಧ್ಯಕ್ಷ ಜೆಜೆಸಿ ಗೌತಮ್ ಗೌಂಡತ್ತಿಗೆ, ಜೇಸಿ ಕಿಶೋರ್ ಕುಮಾರ್ ಉಪಸ್ಥಿತರಿದ್ದರು.

Post a Comment

Previous Post Next Post