ಕುಕ್ಕೆ ಸುಬ್ರಹ್ಮಣ್ಯ:ಶ್ರೀ ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದಲ್ಲಿ ಬರುವ 30.08.2025 ಹಾಗೂ 31.08.2025 ರಂದು ಉಚಿತ ಕಿವಿ ಶ್ರವಣ ತಪಾಸಣೆ ಶಿಬಿರ ಹಾಗೂ ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳ ವಿತರಣೆ ಕಾರ್ಯಕ್ರಮ ನಡೆಯಲಿದೆ.
ಶ್ರವಣ ತೊಂದರೆ ಎದುರಿಸುತ್ತಿರುವವರಿಗೆ ಈ ಶಿಬಿರದಲ್ಲಿ ಪರಿಣಿತರಿಂದ ಉಚಿತವಾಗಿ ಕಿವಿ ಪರೀಕ್ಷೆ ನಡೆಸಲಾಗುವುದು. ಜೊತೆಗೆ ಅಗತ್ಯವಿರುವವರಿಗೆ ಶ್ರವಣ ಯಂತ್ರಗಳನ್ನು ಕಡಿತ ದರದಲ್ಲಿ ನೀಡಲಾಗುತ್ತದೆ.
➡ ದಿನಕ್ಕೆ ಕೇವಲ 40 ಜನರಿಗೆ ಮಾತ್ರ ತಪಾಸಣೆ ಮಾಡಲು ಅವಕಾಶವಿದ್ದು, ಆಸಕ್ತರು ಮುಂಚಿತವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
➡ ನೋಂದಣಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: +91 99023 44399, 94485 48574
ಸಾಮಾಜಿಕ ಹಿತವನ್ನು ಗಮನದಲ್ಲಿಟ್ಟು ಆಯೋಜಿಸಲಾಗಿರುವ ಈ ಶಿಬಿರದಿಂದ ಅನೇಕರು ಪ್ರಯೋಜನ ಪಡೆಯುವ ನಿರೀಕ್ಷೆ ಇದೆ.
Post a Comment