ನೆಲ್ಯಾಡಿ: ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಭಾವಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತ್ ಅಧ್ಯಕ್ಷ ಸಲಾಂ ಬಿಲಾಲ್ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಬೆಥನಿ ಧರ್ಮ ಸೇವಾ ಸಂಘಂ ಇದರ ಸಂಚಾಲಕರಾದ ರೆ. ಫಾ. ಡಾ. ವರ್ಗೀಸ್ ಕೈಪನಡ್ಕ, ಬೆಥನಿ ಐಟಿಐ ನೆಲ್ಯಾಡಿ ಇದರ ನಿರ್ದೇಶಕರಾದ ರೆ. ಫಾ. ಜೋರ್ಜ್ ಸ್ಯಾಮುವೆಲ್ ಓ ಐ ಸಿ, ರೆ. ಫಾ. ಜೈಸನ್ ಸೈಮನ್ ಓ ಐ ಸಿ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಉಷಾ ಜೋಯ್, ಬೆಥನಿ ಐಟಿಐ ಪ್ರಾಂಶುಪಾಲ ಸಜಿ ಕೆ. ತೋಮಸ್, ತರಬೇತಿ ಅಧಿಕಾರಿಯಾದ ಜಾನ್ ಪಿ ಎಸ್., ನೆಲ್ಯಾಡಿ ಸೀನಿಯರ್ ಚೇಂಬರ್ ಅಧ್ಯಕ್ಷ ಸೀನಿಯರ್ ಪಿಪಿಎಫ್ ಪ್ರಕಾಶ್ ಕೆ. ವೈ, ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.
ರಾಷ್ಟ್ರಗೀತೆ, ದೇಶಭಕ್ತಿಗೀತೆಗಳು ಮತ್ತು ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ದಿನದ ಮುಖ್ಯ ಆಕರ್ಷಣೆಯಾಗಿದ್ದವು.
Post a Comment