ಕಡಬ ತಾಲೂಕಿನ ಕೌಕ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಹರ್ಷೋಲ್ಲಾಸದಿಂದ ಆಚರಿಸಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯ ಕುಮಾರ್ ಗೌಡ ಧ್ವಜಾರೋಹಣ ನೆರವೇರಿಸಿ ದೇಶಭಕ್ತಿಯ ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಎಂ. ಕೆ. ಇಬ್ರಾಹಿಂ, ಪಂಚಾಯತ್ ಕಾರ್ಯದರ್ಶಿ ದೇವಿಕಾ, ಉಪಾಧ್ಯಕ್ಷೆ ವನಿತಾ, ಸದಸ್ಯರಾದ ವಿಶ್ವನಾಥ್ ಗೌಡ, ಸವಿತಾ, ಹನೀಫ್, ದಿನೇಶ್, ರೋಹಿ, ಜನಾರ್ಧನ್, ದೇವಕಿ, ಭವಾನಿ, ಲೋಕೇಶ್ ಬಾಣಜಾಲ್, ಶೈಲಾ, ಸುಧಾಕರ್, ಪುಷ್ಪ, ಡೈಸಿ, ರತ್ನಾವತಿ ಹಾಗೂ ಪಂಚಾಯತ್ ಸಿಬ್ಬಂದಿ, ಸಂಜೀವಿನಿ ಘಟಕದ ಸಿಬ್ಬಂದಿಗಳು ಹಾಜರಿದ್ದರು.
ಕಾರ್ಯಕ್ರಮದಲ್ಲಿ ರಾಷ್ಟ್ರಪ್ರೇಮದ ವಾತಾವರಣ ಹರಡಿದ್ದು, ಗ್ರಾಮಸ್ಥರು ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಪಾಲ್ಗೊಂಡರು.
Post a Comment