ಬೆಂಗಳೂರು: ಸುಳ್ಯ ತಾಲೂಕಿನ ಹಳೆಯ ನ್ಯಾಯಾಲಯಕ್ಕೆ ನೂತನ ಸಂಕೀರ್ಣ ಮಂಜೂರು ಮಾಡುವಂತೆ ಕರ್ನಾಟಕ ರಾಜ್ಯದ ಕಾನೂನು ಸಚಿವರಾದ ಎಚ್.ಕೆ. ಪಾಟೀಲ ಅವರಿಗೆ ಇಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮನವಿಯನ್ನು ಸಲ್ಲಿಸಿದರು.
ಸುಳ್ಯ ನ್ಯಾಯಾಲಯವು 50 ವರ್ಷಗಳ ಹಳೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹಂಚಿನ ಮೇಲ್ಚಾವಣಿಯಲ್ಲಿ ನ್ಯಾಯಾಂಗ ಕಲಾಪಗಳು ನಡೆಯುತ್ತಿರುವ ಸ್ಥಿತಿ ಎದುರಾಗಿದೆ. ವಿಶೇಷವಾಗಿ ಮಳೆಗಾಲದಲ್ಲಿ ನೀರು ಸೋರಿಕೆ, ಮೂಲಸೌಕರ್ಯಗಳ ಕೊರತೆ, ಸ್ಥಳಾಭಾವ ಇತ್ಯಾದಿ ತೊಂದರೆಗಳನ್ನು ಮನಗಂಡು ನೂತನ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಬೇಡಿಕೆ ಮುಂದಿರಿಸಲಾಗಿದೆ.
ಮನವಿಯನ್ನು ಸ್ವೀಕರಿಸಿದ ಕಾನೂನು ಸಚಿವ ಎಚ್.ಕೆ. ಪಾಟೀಲ ಅವರು ಈ ಬಗ್ಗೆ ಗಂಭೀರ ಗಮನ ಹರಿಸುವುದಾಗಿ ಭರವಸೆ ನೀಡುತ್ತ, ಅಗತ್ಯ ಅನುದಾನವನ್ನು ಶೀಘ್ರದಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
ಇದರಿಂದ ಸುಳ್ಯ ತಾಲೂಕಿನ ಕಾನೂನು ವಲಯ ಹಾಗೂ ಸಾರ್ವಜನಿಕರು ಬಹುಕಾಲದಿಂದ ನಿರೀಕ್ಷಿಸುತ್ತಿರುವ ನೂತನ ನ್ಯಾಯಾಲಯ ಸಂಕೀರ್ಣದ ಕನಸು ಶೀಘ್ರದಲ್ಲೇ ನನಸಾಗುವ ನಿರೀಕ್ಷೆ ಮೂಡಿದೆ.
Post a Comment