ಕಡಬ, ಆ.5: ದಕ್ಷಿಣ ಕನ್ನಡ ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಆರ್‌ಎಎಫ್ (ರ್ಯಾಪಿಡ್ ಆಕ್ಷನ್ ಫೋರ್ಸ್) ಪಡೆದಿಂದ ಪಥಸಂಚಲನ ನಡೆಯಿತು.
ಪಥಸಂಚಲನವು ಕಡಬ ಅನುಗ್ರಹ ಸಭಾಭವನದ ಸಮೀಪದಿಂದ ಆರಂಭವಾಗಿ ಪೇಟೆ ಪ್ರದೇಶದ ಮುಖಾಂತರ ಸಾಗಿದ್ದು, ಸೈಂಟ್ ಜೋಕಿಂ ಚರ್ಚ್ ವರೆಗೆ ನಡೆಯಿತು. ಸಾರ್ವಜನಿಕರಲ್ಲಿ ಭದ್ರತೆ ಹಾಗೂ ವಿಶ್ವಾಸ ಮೂಡಿಸುವ ಉದ್ದೇಶದಿಂದ ಈ ಪಥಸಂಚಲನ ನಡೆಸಲಾಯಿತು.
ಈ ಸಂದರ್ಭದಲ್ಲಿ ಆರ್‌ಎಎಫ್ ಡಿವೈಎಸ್‌ಪಿ ಅನಿಲ್ ಜಾದವ್, ಇನ್ಸ್ಪೆಕ್ಟರ್ ಜಿ. ಮನೋಹರ್, ಕಡಬ ಠಾಣಾಧಿಕಾರಿ ಅಭಿನಂದನ್ ಎಂ.ಎಸ್ ಹಾಗೂ ಅಕ್ಷಯ್ ಡವಗಿ ಸೇರಿದಂತೆ ಹಲವಾರು ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.
ಸ್ಥಳೀಯರು ಪಥಸಂಚಲನದ ಕ್ರಮವನ್ನು ಶ್ಲಾಘಿಸುತ್ತಾ, ಶಾಂತಿ ಹಾಗೂ ಸೌಹಾರ್ದತೆಗೆ ಇದೊಂದು ಒಳ್ಳೆಯ ಸಂದೇಶ ನೀಡುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
Post a Comment