ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ತು ನೀಡುವುದು ಮೆಸ್ಕಾಂನ ಪ್ರಥಮ ಆದ್ಯತೆ – ಅಧೀಕ್ಷಕ ಎಂಜಿನಿಯರ್ ಕೃಷ್ಣರಾಜ.

ಸುಬ್ರಹ್ಮಣ್ಯ, ಆಗಸ್ಟ್ 7: ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಸುಬ್ರಹ್ಮಣ್ಯ ಉಪ ವಿಭಾಗ ಹಾಗೂ ಸುಳ್ಯ ಉಪ ವಿಭಾಗದ ಮೆಸ್ಕಾಂ ಗ್ರಾಹಕರ ಜನ ಸಂಪರ್ಕ ಸಭೆ ಗುರುವಾರ ನಡೆಯಿತು. ಸಭೆಯಲ್ಲಿ ಮಾತನಾಡಿದ ಮೆಸ್ಕಾಂ ಮಂಗಳೂರು ವೃತ್ತದ ಅಧೀಕ್ಷಕ ಎಂಜಿನಿಯರ್ ಕೃಷ್ಣರಾಜ, “ಮಳೆಗಾಲದ ಕಾರಣದಿಂದ ವಿದ್ಯುತ್ ವ್ಯತ್ಯಯ ಸಂಭವಿಸಬಹುದು. ಆದರೂ ಗ್ರಾಹಕರ ಸಹಕಾರದೊಂದಿಗೆ ಸುರಕ್ಷಿತ ಹಾಗೂ ಗುಣಮಟ್ಟದ ವಿದ್ಯುತ್ತು ಒದಗಿಸುವುದೇ ನಮ್ಮ ಪ್ರಧಾನ ಆದ್ಯತೆ” ಎಂದು ತಿಳಿಸಿದರು.



ಈ ಸಭೆಯಲ್ಲಿ ವಿವಿಧ ಗ್ರಾಮಗಳ ಗ್ರಾಹಕರು ತಮ್ಮ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆಯಿದರು:

ಪಂಜದಲ್ಲಿ 110 ಕೆ.ವಿ. ವಿದ್ಯುತ್ ಸ್ಟೇಷನ್ ಸ್ಥಾಪನೆಗೆ ಆಗ್ರಹ – ವಸಂತಕುಮಾರ ಕಿದಿಲ, ಜಮಾಲುದ್ದೀನ್ ಒಕ್ಕಲಿನ್

ಗುತ್ತಿಗಾರು 33 ಕೆವಿ ಸಬ್ಸ್ಟೇಷನ್ ಸಮಸ್ಯೆ ಮತ್ತು OFC ಕೇಬಲ್ ಸಂಬಂಧಿತ ಅಡಚಣೆ – ಉದಯಕುಮಾರ್ ದೇವಪ್ಪಜ್ಜ

ಲೈನ್ ಮ್ಯಾನ್‌ಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ – ಸ್ಥಳೀಯರು

ಐನೇಕಿದು, ಹರಿಹರ, ಬಾಳುಗೋಡು, ಕೊಲ್ಲಮೊಗರು ಪ್ರದೇಶದ ವಿದ್ಯುತ್ ವ್ಯತ್ಯಯ – ಹರೀಶ ಮೆಟ್ಟಿನಡ್ಕ ಹಾಗೂ ಇತರರು

ಮೆಸ್ಕಾಂ ಬಿಲ್ಲಿನಲ್ಲಿ ವ್ಯತ್ಯಾಸ ಹಾಗೂ ಮೀಟರ್ ಬದಲಾವಣೆ ವಿಳಂಬ – ದಿನೇಶ್ ಸರಸ್ವತಿ ಮಹಲ್, ಜಮಾಲುದ್ದೀನ್

ಮರದ ಕೊಂಬೆಗಳ ಕಟಿಂಗ್ ಕುರಿತಾಗಿ ಅಸಮಾಧಾನ – ಸತೀಶ ಕೂಜುಗೋಡು ಹಾಗೂ ಇನ್ನಿತರ ಗ್ರಾಹಕರು


ಸಭೆಯಲ್ಲಿ ಜಿಲ್ಲಾ ಗ್ಯಾರೆಂಟಿ ಯೋಜನಾ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಮೆಸ್ಕಾಂ ಸಲಹಾ ಸಮಿತಿ ಸದಸ್ಯ ದಿನೇಶ್ ಹಾಲಿಮಜಲು, ಕೃಷ್ಣಪ್ಪ ನಾಯ್ಕ, ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಎ, ಸುಬ್ರಹ್ಮಣ್ಯ ಉಪ ವಿಭಾಗದ ಎಇಇ ಸತೀಶ ಸಪಲ್ಯ, ಸುಳ್ಯ ಉಪ ವಿಭಾಗದ ಹರೀಶ್ ನಾಯ್ಕ, ಸಹಾಯಕ ಇಂಜಿನಿಯರ್‌ಗಳು ಹರಿಕೃಷ್ಣ ಕೆ.ಜಿ., ಚಿದಾನಂದ ಕೆ., ಸುಪ್ರೀತ್ ಕುಮಾರ್, ಕಿರಿಯ ಇಂಜಿನಿಯರ್‌ಗಳು ಪ್ರಸಾದ್ ಕೆವಿ, ಅಭಿಷೇಕ್, ಮಹೇಶ್, ಸುನಿತಾ ಮತ್ತು ಕಚೇರಿ ಸಿಬ್ಬಂದಿ ಗಣೇಶ್, ಅನುರಾಧ ಉಪಸ್ಥಿತರಿದ್ದರು.

Post a Comment

Previous Post Next Post