ಸುಬ್ರಹ್ಮಣ್ಯ ಆಗಸ್ಟ್ 12 : ಸುಬ್ರಹ್ಮಣ್ಯ ಇನ್ನರ್ವೀಲ್ ಕ್ಲಬ್ಬಿಗೆ ಜಿಲ್ಲಾ ಚೇರ್ಮೆನ್ ಶಬರಿ ಕಡಿದಾಳ್ ಸೋಮವಾರ ಅಧಿಕೃತ ಭೇಟಿ ನೀಡಿದರು. ಶಬರಿ ಕಡಿದಲ್ ಅವರು ಶಿವಮೊಗ್ಗ ಮೂಡಿಗೆರೆ ಇನ್ನರ್ ವಿಲ್ ಕಬ್ಬಲ್ಲಿ ಬಹಳಷ್ಟು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಇದೀಗ ಜಿಲ್ಲಾ ಚೇರ್ಮನ್ ಆಗಿ ಸುಬ್ರಮಣ್ಯ ಕ್ಲಬ್ಬಿಗೆ ಅಧಿಕೃತವಾಗಿ ಭೇಟಿ ನೀಡಿರುವರು.ಸುಬ್ರಹ್ಮಣ್ಯ ಇನ್ನರ್ವಿಲ್ ಕ್ಲಬ್ಬಿನ ಅಧ್ಯಕ್ಷ ವಿಮಲ ರಂಗಯ್ಯ, ಕಾರ್ಯದರ್ಶಿ ಶೋಭಾಗಿರಿಧರ್ ಹಾಗೂ ಸದಸ್ಯರುಗಳು ಅವರನ್ನ ಬರಮಾಡಿಕೊಂಡರು. ಶಬರಿ ಕಡಿದಾಳ್ ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಇನ್ನರ್ವೇಲ್ ಕ್ಲಬ್ಬಿನ ಅಧ್ಯಕ್ಷ ಹಾಗು ಎಲ್ಲ ಸದಸ್ಯರುಗಳನ್ನು ಸೇರಿಸಿ ಕ್ಲಬ್ ಅಸೆಂಬ್ಲಿ ಮಾಡಿದರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಇನ್ನರ್ ವೀಲ್ ಕ್ಲಬ್ ವತಿಯಿಂದ ನಡೆದ ಕಾರ್ಯ ಚಟುವಟಿಕೆಗಳನ್ನು ಶ್ಲಾಾಗಿಸಿದರು. ಇದೇ ಸಂದರ್ಭದಲ್ಲಿ ಕ್ಲಬ್ ವತಿಯಿಂದ ಆಟಿ ಆಚರಣೆಯನ್ನು ಕೂಡ ನಡೆಸಲಾಯಿತು.ಕ್ಲಬ್ಬಿನ ಎಲ್ಲಾ ಸದಸ್ಯರು ಸುಮಾರು 15ಕ್ಕೂ ಮಿಕ್ಕಿ ವಿವಿಧ ಬಗೆಯ ಆಟಿಯ ತಿನಿಸುಗಳನ್ನ ಸಿದ್ಧಪಡಿಸಿ ಆಚರಣೆಯಲ್ಲಿ ಭಾಗವಹಿಸಿದ್ದರು. ಆಟಿ ಆಚರಣೆಯನ್ನ ಡಿಸ್ಟ್ರಿಕ್ಟ್ ಚೇರ್ಮನ್ ಶಬರಿ ಕಡಿದಾಳ್ ಅವರು ಚೆನ್ನಮಣಿ ಆಡುವ ಮೂಲಕ ಅಧಿಕೃತವಾಗಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಸುಬ್ರಮಣ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷ ಜಯಪ್ರಕಾಶ್ ಮುಖ್ಯ ಅತಿಥಿಯಾಗಿದ್ದರು. ಈ ಸಂದರ್ಭದಲ್ಲಿ ಇನ್ನರ್ವೆಲ್ ಕ್ಲಬ್ಬಿನ ಸಚಿತ ಗೋಪಾಲ್, ಜಾನಕಿ ವೆಂಕಟೇಶ್, ಲೀಲಾ ವಿಶ್ವನಾಥ್,, ಸರೋಜಾ ಮೈಲಪ್ಪ, ಸುನೀತ ನವೀನ್ ವಾಲ್ತಾಜೆ, ಶ್ರೀಜಾ ಚಂದ್ರಶೇಖರ್, ವೇದ ಶಿವರಾಮ್ ಚಂದ್ರ ಹೊನ್ನಪ್ಪ,ಭಾರತಿ ದಿನೇಶ್,ಸೌಮ್ಯ ದಿನೇಶ್, ಅಕ್ಷತಾ ಕಲ್ಕುದಿ, ರೋಟರಿ ಕ್ಲಬ್ಬಿನ ಸದಸ್ಯರು ಹಾಗೂ ಆಹ್ವಾನಿತರು ಭಾಗವಹಿಸಿದ್ದರು. ಇನ್ನರ್ ವೇಲ್ ಕ್ಲಬ್ಬಿನ ಕಾರ್ಯದರ್ಶಿ ಶೋಭಾ ಗಿರಿಧರ್ ಅವರ ಹುಟ್ಟುಹಬ್ಬವನ್ನು ಕೂಡ ಆಚರಿಸಲಾಯಿತು.
Post a Comment