ಕುಕ್ಕೆ ಸುಬ್ರಹ್ಮಣ್ಯ ಆರಕ್ಷಕ ಠಾಣೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ರಕ್ಷಾಬಂಧನ ಕಾರ್ಯಕ್ರಮ ಭಾವಪೂರ್ಣವಾಗಿ ಜರುಗಿತು.
ಕಳೆದ 11 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ, ಈ ಬಾರಿ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೂ ಶುಭ ಹಾರೈಸಿ ರಕ್ಷಣಾ ಸೂತ್ರವನ್ನು ಕಟ್ಟುವ ಮೂಲಕ ಸಹೋದರತ್ವದ ಸಂದೇಶ ಹಂಚಲಾಯಿತು.
ಇದೇ ಸಂದರ್ಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಅವರಿಗೆ ಅಭಿನಂದನೆ ಸಲ್ಲಿಸಿ ರಕ್ಷೆಯನ್ನು ಕಟ್ಟಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ವಾಣಿ ವನಿತಾ ಸಮಾಜದ ಅಧ್ಯಕ್ಷೆ ಪುಷ್ಪ ಕೆ., ಕಾರ್ಯದರ್ಶಿ ಸುಜಾತ ಗಣೇಶ್, ಸದಸ್ಯೆಯರಾದ ಹೇಮಾವತಿ, ತ್ರಿವೇಣಿ ದಾಮ್ಲೆ, ಶೀಲಾ, ಅನನ್ಯ ಹಾಗೂ ಶರಣ್ಯ ಉಪಸ್ಥಿತರಿದ್ದರು.
ಸೌಹಾರ್ದ, ಪ್ರೀತಿ ಮತ್ತು ಪರಸ್ಪರ ಗೌರವದ ಸಂದೇಶವನ್ನು ಹಬ್ಬಿಸಿದ ಈ ಕಾರ್ಯಕ್ರಮಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಯಿತು.
Post a Comment