ನೆಲ್ಯಾಡಿ: ನೆಲ್ಯಾಡಿ ಬೆಥನಿ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಭಾವಪೂರ್ಣವಾಗಿ ಹಾಗೂ ಹರ್ಷೋದ್ಗಾರದಿಂದ ಜರುಗಿತು. ನೆಲ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ಧ್ವಜಾರೋಹಣ ನೆರವೇರಿಸಿ, ರಾಷ್ಟ್ರಗೀತೆ ಗಾಯನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ, ಕಡಬ ತಾಲೂಕು ಘಟಕದ ವತಿಯಿಂದ ಮಾಜಿ ಸೈನಿಕರ ಪಥಸಂಚಲನ ಜರುಗಿತು. ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಫಾ. ಸ್ಯಾಮುವೇಲ್ ಒಐಸಿ, ಫಾ. ಜೈಸನ್ ಸೈಮನ್ ಒಐಸಿ, ಪ್ರಾಂಶುಪಾಲರಾದ ಫಾ. ಡಾ. ವರ್ಗೀಸ್ ಕೈಪನಡ್ಕ, ಪಿಟಿಐ ಅಧ್ಯಕ್ಷ ಸನ್ನಿ ಕೆ.ಎಸ್., ಮಾಜಿ ಸೈನಿಕರಾದ ಸಬಾಷ್ಟಿನ್, ಮ್ಯಾಥ್ಯು ಟಿ.ಜೆ., ಗ್ರಾಮ ಪಂಚಾಯತ್ ಸದಸ್ಯೆ ಉಷಾ ಜೋಯಿ ಹಾಗೂ ವರ್ತಕರ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್. ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ದೇಶಭಕ್ತಿಗೀತೆ, ನೃತ್ಯಗಳ ಮೂಲಕ ದೇಶಪ್ರೇಮದ ಸಂದೇಶ ಹರಡಲಾಯಿತು. ಶಾಲಾ ಸಂಚಾಲಕರು ಹಾಗೂ ಅತಿಥಿಗಳು ತಮ್ಮ ಸಂದೇಶದಲ್ಲಿ ಸ್ವಾತಂತ್ರ್ಯದ ತತ್ವ, ರಾಷ್ಟ್ರನಿಷ್ಠೆ ಮತ್ತು ಯುವ ಪೀಳಿಗೆಯ ಕರ್ತವ್ಯಗಳ ಕುರಿತು ಪ್ರೇರಣಾದಾಯಕವಾಗಿ ಮಾತನಾಡಿದರು.
ವಿವಿಧ ಸ್ಪರ್ಧೆ ಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು
ಕೊನೆಯಲ್ಲಿ ಶಿಕ್ಷಕ ರಕ್ಷಕ ಸಂಘದ ವರಿಂದ ಎಲ್ಲರಿಗೂ ಸಿಹಿ ವಿತರಣೆ ಮಾಡಲಾಯಿತು.ಹಾಗೂ ಮಾಜಿ ಸೈನಿಕರ ನ್ನು ಗೌರವಿಸ ಲಾಯಿತು.
---
Post a Comment