79ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸಂಭ್ರಮದಿಂದ ನೆಲ್ಯಾಡಿಯ ಗಾಂಧಿ ಮೈದಾನದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಂಯೋಜನೆಯಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆಯೊಂದಿಗೆ ಧ್ವಜಾರೋಹಣ ನಡೆಸಲಾಯಿತು. ಧ್ವಜಾರೋಹಣವನ್ನು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀ ಸಲಾಂ ಬಿಲಾಲ್ ನೆರವೇರಿಸಿದರು. ಇವರು ಸ್ವಾತಂತ್ರ್ಯ ಹೋರಾಟದ ಇತಿಹಾಸ ಕಥನವನ್ನು ಮೆಲುಕು ಹಾಕುತ್ತಾ, ದೇಶದ ಅಭಿವೃದ್ಧಿಯಲ್ಲಿ ತಮ್ಮ ಜವಾಬ್ದಾರಿಗಳ ಕುರಿತು ಶುಭ ಕೋರಿದರು. ಈ ಸಂದರ್ಭದಲ್ಲಿ ಡಾ. ಸೀತಾರಾಮ ಪಿ , ಉಪನ್ಯಾಸಕರು, ವಿ.ವಿ. ಕಾಲೇಜು ಹಾಗೂ ಶ್ರೀ ಸತೀಶ್ ದುರ್ಗಾಶ್ರೀ , ಸದಸ್ಯರು ವರ್ತಕರ ಸಂಘ ಮತ್ತು ಜೆಸಿಐ ಸಂಘ ನೆಲ್ಯಾಡಿ ಇವರುಗಳು ಸ್ವಾತಂತ್ರ್ಯ ಹೋರಾಟದ ಐತಿಹಾಸಿಕ ಮಾಹಿತಿಯೊಂದಿಗೆ ದೇಶದ ಐಕ್ಯತೆ ಮತ್ತು ಅಭಿವೃದ್ಧಿಯ ನೆಲೆಯಲ್ಲಿ ಪ್ರಸ್ತುತ ಜವಾಬ್ದಾರಿಗಳ ಕುರಿತು ಮಾತನಾಡಿ ಶುಭಾಶಯಗಳನ್ನು ಸಲ್ಲಿಸಿದರು. ಕಾಲೇಜಿನ ಅನುಷ್ಠಾನ ಸಮಿತಿಯ ಕಾರ್ಯದರ್ಶಿ ಹಾಗೂ ಪಂಚಾಯತ್ ಸಿಬ್ಬಂದಿ ಶ್ರೀ ಶಿವಪ್ರಸಾದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳೊಂದಿಗೆ ಧ್ವಜಗೀತೆ, ವಂದೇ ಮಾತರಂ, ಜನಗಣಮನ ರಾಷ್ಟ್ರ ಗೀತೆಗಳನ್ನು ಹಾಡಲಾಯಿತು. ಪಂಚಾಯತ್ ನ ಕಾರ್ಯದರ್ಶಿ ಶ್ರೀ ಅಂಗುರವರು ಧನ್ಯವಾದಗಳನ್ನು ಸಲ್ಲಿಸಿದರು. ಪಂಚಾಯತ್ ವತಿಯಿಂದ ನೆರೆದವರಿಗೆ ಸಿಹಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ನೇಸರ ಪತ್ರಿಕೆಯ ಮುಖ್ಯಸ್ಥ ಶ್ರೀ ಪ್ರಶಾಂತ್, ಪಂಚಾಯತ್ , ಜೆಸಿಐ ಸದಸ್ಯರುಗಳು, ವಿವಿ ಕಾಲೇಜಿನ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
*ನೆಲ್ಯಾಡಿಯ ಗಾಂಧಿ ಮೈದಾನದಲ್ಲಿ ವಿಶ್ವ ವಿದ್ಯಾಲಯ ಕಾಲೇಜು, ಗ್ರಾಮ ಪಂಚಾಯತ್ , ವರ್ತಕರ ಸಂಘ ಹಾಗೂ ಜೆಸಿಐ ನೆಲ್ಯಾಡಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ*
Newspad
0
Premium By
Raushan Design With
Shroff Templates
Post a Comment