ಬಂಟ್ವಾಳ: ವಾರೆಂಟ್ ಅಸಾಮಿ ಬಂಧನ – ಜಾಮೀನಿನ ಮೇಲೆ ಬಿಡುಗಡೆ.

ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಎರಡು ಪ್ರಕರಣಗಳಲ್ಲಿ ವಾರೆಂಟ್ ಅಸಾಮಿಯಾಗಿ ತಲೆಮರೆಸಿಕೊಂಡಿದ್ದ ಸುನಿಲ್ (35), ಮಲ್ಲೂರು, ಮಂಗಳೂರು ತಾಲೂಕು ಮೂಲದವನನ್ನು ಪೊಲೀಸರು ಬಂಧಿಸಿದ್ದಾರೆ.

ಮಾಹಿತಿಯಂತೆ, CC ನಂ.1540/2016 (ಅ.ಕ್ರ.198/2016) ಹಾಗೂ CC ನಂ.806/2017 (ಅ.ಕ್ರ.99/2016) ಪ್ರಕರಣಗಳಲ್ಲಿ ಭಾರತೀಯ ದಂಡ ಸಂಹಿತೆಯ ಕಲಂ 457, 380, 411 ಅಡಿಯಲ್ಲಿ ಆರೋಪಿಯಾಗಿದ್ದ ಸುನಿಲ್, ಹಲವು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ವಾರೆಂಟ್ ಅಸಾಮಿಯಾಗಿದ್ದನು.

ದಿನಾಂಕ 17-09-2025ರಂದು ವಾಮಂಜೂರು ಪ್ರದೇಶದಲ್ಲಿ ದಸ್ತಗಿರಿ ಮಾಡಿದ ಪೊಲೀಸರು, ಆ ದಿನವೇ ಮಾನ್ಯ ACJ & JMFC ನ್ಯಾಯಾಲಯ, ಬಂಟ್ವಾಳ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.

ನ್ಯಾಯಾಲಯವು ವಿಚಾರಣೆ ನಡೆಸಿ, ಆರೋಪಿಗೆ ಎರಡೂ ಪ್ರಕರಣಗಳಲ್ಲಿ ಸೂಕ್ತ ಜಾಮೀನಿನ ಮೇಲೆ ಬಿಡುಗಡೆ ನೀಡಿದೆ.

👉 ಈ ಪ್ರಕರಣಗಳು ಮನೆಕಳ್ಳತನ ಮತ್ತು ಕಳವುಗೆ ಸಂಬಂಧಿಸಿದವು ಎಂದು ಮೂಲಗಳು ತಿಳಿಸಿವೆ.

Post a Comment

أحدث أقدم