ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ಕಡಂಬು ಪ್ರದೇಶದಲ್ಲಿ 04.09.2025ರ ರಾತ್ರಿ ದನವೊಂದು ಕಳವು ಆಗಿ ಹತ್ಯೆಯಾದ ಘಟನೆ ಹಿನ್ನೆಲೆಯಲ್ಲಿ ಹೊಸ ಬೆಳವಣಿಗೆ ನಡೆದಿದೆ.
ಈ ಘಟನೆಯ ಕುರಿತು ಮಾತನಾಡುವಾಗ ನರಸಿಂಹ ಶೆಟ್ಟಿ ಮಾಣಿ ಎಂಬಾತನು ವಾಸ್ತವಾಂಶಗಳಿಗೆ ವಿರುದ್ಧವಾಗಿ ಸುಳ್ಳು ಸುದ್ದಿಯನ್ನು ಹಬ್ಬಿಸುವುದಲ್ಲದೇ, ಧರ್ಮಧರ್ಮಗಳ ನಡುವೆ ಕೋಮುಧ್ವೇಷ ಹಾಗೂ ವೈರತ್ವ ಉಂಟಾಗುವಂತೆ ಪ್ರಚೋದನಕಾರಿಯಾಗಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಸದ್ಯದ ವಿಡಿಯೋವು ಸಮಾಜದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯಾಗುವ ಹಾಗೂ ಸಾರ್ವಜನಿಕರಲ್ಲಿ ಭಯಭೀತಿ ಉಂಟುಮಾಡುವ ಸ್ವರೂಪದ್ದಾಗಿರುವುದರಿಂದ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನರಸಿಂಹ ಶೆಟ್ಟಿ ಮಾಣಿ ವಿರುದ್ಧ ಅ.ಕ್ರ: 132/2025ರಂತೆ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.
Post a Comment