ಸುಳ್ಯ: ಏಬಿವಿಪಿ ಸಂಘಟನೆಯು ಆಯೋಜಿಸಿದ್ದ ರಾಣಿ ಅಬ್ಬಕ್ಕ ರಥಯಾತ್ರೆ ಸೋಮವಾರ ಸುಳ್ಯಕ್ಕೆ ಬಂದು ತಲುಪಿತು. ನಗರ ಪ್ರವೇಶಿಸಿದ ಸಂದರ್ಭದಲ್ಲಿ ಬೃಹತ್ ಮೆರವಣಿಗೆ, ಡೊಳ್ಳು, ನೃತ್ಯಗಳ ನಡುವೆ ರಥಕ್ಕೆ ಭವ್ಯ ಸ್ವಾಗತ ನೀಡಲಾಯಿತು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ರಥಕ್ಕೆ ಸ್ವಾಗತ ಕೋರಿದ್ದು, ಬಳಿಕ ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಂಡು ಜನರೊಂದಿಗೆ ಹೆಜ್ಜೆ ಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು —
"ರಾಣಿ ಅಬ್ಬಕ್ಕ ನಮ್ಮೆಲ್ಲರ ಹೆಮ್ಮೆ. ಅವರು ವಿದೇಶಿ ಆಕ್ರಮಣಕಾರರ ವಿರುದ್ಧ ಹೋರಾಡಿ ಕನ್ನಡನಾಡಿನ ಗೌರವ ಕಾಪಾಡಿದ ಧೀರ ನಾಯಕಿ. ಅವರ ಶೌರ್ಯ, ನಾಡಿನ ನಿಷ್ಠೆ ಇಂದಿನ ಯುವ ಪೀಳಿಗೆಗೆ ಪ್ರೇರಣೆಯಾಗಬೇಕು. ಇಂತಹ ರಥಯಾತ್ರೆಗಳು ಇತಿಹಾಸವನ್ನು ನೆನಪಿಸುತ್ತವೆ, ನಮ್ಮ ಸಂಸ್ಕೃತಿ–ಸಮುದಾಯ ಬಲವನ್ನು ಹೆಚ್ಚಿಸುತ್ತವೆ," ಎಂದು ಹೇಳಿದರು.
ಅವರು ಮುಂದುವರಿದು, "ಅಬ್ಬಕ್ಕ ಅವರ ಬಾಳಿನ ಶೌರ್ಯ ಕಥೆಗಳು ಮನೆಮನೆಗೂ ತಲುಪಬೇಕಾಗಿದೆ. ಈ ಯಾತ್ರೆಯ ಮೂಲಕ ವಿದ್ಯಾರ್ಥಿಗಳು ಹಾಗೂ ಜನತೆ ನಮ್ಮ ವೀರ ಮಹಿಳೆಯ ಬದುಕಿನ ಸಂದೇಶವನ್ನು ಅರ್ಥಮಾಡಿಕೊಂಡು ಸಮಾಜ ನಿರ್ಮಾಣದಲ್ಲಿ ಪಾಲ್ಗೊಳ್ಳಬೇಕು," ಎಂದು ಆಶಯ ವ್ಯಕ್ತಪಡಿಸಿದರು.
ರಥಯಾತ್ರೆಯಲ್ಲಿ ಎಬಿವಿಪಿ ಕಾರ್ಯಕರ್ತರು, ವಿದ್ಯಾರ್ಥಿಗಳು, ಸ್ಥಳೀಯ ಸಂಘಟನೆಗಳು ಹಾಗೂ ಜನಸಾಮಾನ್ಯರು ಉತ್ಸಾಹದಿಂದ ಭಾಗವಹಿಸಿದರು.
إرسال تعليق