ಕಡಬ ವಾರೆಂಟ್ ಆರೋಪಿ ಗಣೇಶ ಇಡಾಲ ಬಂಧನ.

ಕಡಬ ಪೊಲೀಸ್ ಠಾಣಾ Cr. No. 13/2025, ಕಲಂ 126(2), 352, 351(3) BNS ಪ್ರಕರಣಕ್ಕೆ ಸಂಬಂಧಪಟ್ಟಂತೆ, CC No. 268/2025ರಲ್ಲಿ ಪುತ್ತೂರು ಮಾನ್ಯ ACJ & JMFC ನ್ಯಾಯಾಲಯದಿಂದ ಹೊರಡಿಸಲಾದ ವಾರೆಂಟ್ ಆಧಾರವಾಗಿ ಆರೋಪಿಯೊಬ್ಬರನ್ನು ಕಡಬ ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ನ್ಯೂಸ್ ಅಪ್ಡೇಟ್ ವರದಿಗಾರ ಗಣೇಶ್ ಇಡಾಲಾ 
(ತಂದೆ-ಗುಡ್ಡಪ್ಪ ಗೌಡ, ವಾಸ-ಇಡಾಳ ಮನೆ, ಪೆರಾಬೆ ಗ್ರಾಮ, ಕಡಬ ತಾಲೂಕು) ಎಂಬ ವ್ಯಕ್ತಿಯನ್ನು ದಿನಾಂಕ 01-10-2025 ರಂದು ಸಂಜೆ 7:00 ಗಂಟೆಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತನನ್ನು ಠಾಣೆಗೆ ಕರೆದೊಯ್ದ ನಂತರ, ಪೊಲೀಸರು ಆತನಿಗೆ ಕೈಗೆ ಕೋಳ ತೊಡಿಸಿ ಕಡಬ ಪೇಟೆ ಮಾರ್ಗವಾಗಿ ಕರೆದುಕೊಂಡು ಬಂದು ಬಸ್ ಮೂಲಕ ಸುಳ್ಯಕ್ಕೆ ಕರೆದುಕೊಂಡು ಹೋಗಿ. ನಂತರ ಈತನನ್ನು ದಿನಾಂಕ 02-10-2025 ರಂದು ಮಧ್ಯಾಹ್ನ ಸುಮಾರು 12:00 ಗಂಟೆಗೆ ಮಾನ್ಯ ಸುಳ್ಯ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.

ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದುಬಂದಿದೆ.

Post a Comment

أحدث أقدم