ಸಾಮಾಜಿಕ ಜಾಲತಾಣದಲ್ಲಿ ನಿಷೇಧಿತ PFI ಪರವಾಗಿ ಪೋಸ್ಟ್ – ಒಬ್ಬನ ಬಂಧನ.

ಮಂಗಳೂರು;ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಯ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಪ್ರಕಟಿಸಿದ ಆರೋಪದ ಮೇಲೆ ಮಂಗಳೂರು ನಗರ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಕಚೇರಿಯಿಂದ ನೀಡಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ, ಕೇಂದ್ರ ಸರ್ಕಾರವು ದಿನಾಂಕ 28-09-2022 ರಂದು PFI ಸಂಘಟನೆಯನ್ನು ಕಾನೂನುಬಾಹಿರ ಸಂಘಟನೆಯೆಂದು ಘೋಷಿಸಿತ್ತು. ಇದರ ಹೊರತಾಗಿಯೂ, ಆರೋಪಿಯಾದ ಸೈಯ್ಯದ್ ಇಬ್ರಾಹಿಂ ತಂಙಳ್ (55 ವರ್ಷ), ವಾಸ: ರಾಮಕುಂಜ ಗ್ರಾಮ, ಉಪ್ಪಿನಗಂಡಿ, ದಕ್ಷಿಣ ಕನ್ನಡ, ಅವರು ವಾಟ್ಸ್‌ಆಪ್‌ ಗ್ರೂಪ್‌ನಲ್ಲಿ ನಿಷೇಧಿತ ಸಂಘಟನೆಯ ಪರವಾಗಿ ಪೋಸ್ಟ್‌ ಪ್ರಕಟಿಸಿ, ಆ ಸಂಘಟನೆಯ ಪ್ರಚಾರ ನಡೆಸಿದ ಆರೋಪ ಎದುರಿಸಿದ್ದಾರೆ.

ಈ ಕುರಿತು ಪಿ.ಎಸ್.ಐ. ರವರು ನೀಡಿದ ದೂರಿನ ಮೇರೆಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಅ.ಕ್ರ.113/2025 U/s 10 (a), (i), 13, 18 UAPA Act ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ದಿನಾಂಕ 09-10-2025 ರಂದು ಪೊಲೀಸರು ಆರೋಪಿಯನ್ನು ಮಂಗಳೂರು ನಗರ ಉರ್ವಾ ಸ್ಟೋರ್‌ ಬಳಿಯಿಂದ ವಶಕ್ಕೆ ಪಡೆದು ದಸ್ತಗಿರಿ ಮಾಡಿದ್ದಾರೆ. ತನಿಖೆಯ ಭಾಗವಾಗಿ ಆತನ ಮೊಬೈಲ್ ಫೋನ್‌ ಸಹ ವಶಕ್ಕೆ ಪಡೆದು ಪರಿಶೀಲನೆಗೆ ಒಳಪಡಿಸಲಾಗಿದೆ.

ಬಂಧನದ ನಂತರ ಆರೋಪಿಯನ್ನು ದಿನಾಂಕ 10-10-2025 ರಂದು ಬೆಂಗಳೂರು 49ನೇ ಹೆಚ್ಚುವರಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ (CCH-50) ಮತ್ತು ಎನ್‌ಐಎ ಪ್ರಕರಣಗಳ ವಿಶೇಷ ನ್ಯಾಯಾಲಯ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಯನ್ನು 24-10-2025ರವರೆಗೆ ನ್ಯಾಯಾಂಗ ವಶಕ್ಕೆ ನೀಡಿದೆ.

ಆರೋಪಿಯ ವಿವರ:
ಹೆಸರು: ಸೈಯ್ಯದ್ ಇಬ್ರಾಹಿಂ ತಂಙಳ್
ವಯಸ್ಸು: 55 ವರ್ಷ
ತಂದೆ: ದಿವಂಗತ ಸೈಯ್ಯದ್ ಹಸನ್ ತಂಙಳ್
ವಾಸಸ್ಥಳ: ಬೀಜಾತಳಿ ಹೌಸ್, ರಾಮಕುಂಜ ಗ್ರಾಮ, ಉಪ್ಪಿನಗಂಡಿ, ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.

🔹 ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Post a Comment

أحدث أقدم