*ದುಬೈಯಲ್ಲಿ ಮಿಸಸ್ ಮಂಗಳೂರು ದಿವ 2025 ಕಿರೀಟ ಮುಡಿಗೇರಿಸಿದ ಮಂಗಳೂರು ಬೆಡಗಿ ನೆಲ್ಯಾಡಿಯ ಮಿನು ಜೋಸ್......*

ದುಬೈ ನಲ್ಲಿಪ್ರಿಯಾ ಫ್ಯಾಷನ್ಸ್ ಅವರ ಆಯೋಜನೆಯಲ್ಲಿ ಹಾಗೂ ಗೊಶನ್ ಇವೆಂಟ್ಸ್ ಮೀಡಿಯಾ ಅವರ ಸಹಯೋಗದಲ್ಲಿ ದುಬೈನಲ್ಲಿ ಭವ್ಯವಾಗಿ ನಡೆದ “Mrs Mangalore Diva 2025” ಸ್ಪರ್ಧೆಯಲ್ಲಿ ಮಿನು ಜೋಸ್ ಕಿರೀಟ ಗೆದ್ದಿದ್ದಾರೆ.

ಶಿಶಿಲದಲ್ಲಿ ಜನಿಸಿ, ನೆಲ್ಯಾಡಿಗೆ ವಿವಾಹವಾಗಿ ಪ್ರಸ್ತುತ ದುಬೈನಲ್ಲಿ ವಾಸವಾಗಿರುವ ಮಿನು ಜೋಸ್ ಅವರು ಈ ಗೌರವಾನ್ವಿತ ಪ್ರಶಸ್ತಿಯನ್ನು ಗಳಿಸಿ ಹೆಮ್ಮೆ ಮೂಡಿಸಿದ್ದಾರೆ. ಅವರ ಪತಿ ಅನೂಪ್ ಜೋಸ್ ಮತ್ತು ಇಬ್ಬರು ವರ್ಷದ ಮಗಳು ಐಝಲ್ ಎಲಿಜಬೆತ್ ಅವರ ಪ್ರೇರಣೆ ಹಾಗೂ ಬೆಂಬಲ ಈ ಯಶಸ್ಸಿನ ಹಿನ್ನಲೆಯಲ್ಲಿ ಇದೆ.

ಈ ಸ್ಪರ್ಧೆಯಲ್ಲಿ ನಯನಾ ಶೆಟ್ಟಿ ಫಸ್ಟ್ ರನ್ನರ್ ಅಪ್ ಆಗಿ ಮತ್ತು ಅಶ್ಮಿತಾ ಕೋಟಿಯನ್ ಸೆಕೆಂಡ್ ರನ್ನರ್ ಅಪ್ ಆಗಿ ಆಯ್ಕೆಯಾಗಿದ್ದಾರೆ.

ಮಿಸ್ ವಿಭಾಗದಲ್ಲಿ, ತನುಶ್ರೀ ಶೆಟ್ಟಿ ವಿಜೇತೆ ಆಗಿ, ಶೆರ್ಲಿ ಕ್ರಾಸ್ತಾ ಫಸ್ಟ್ ರನ್ನರ್ ಅಪ್ ಮತ್ತು ಸಿಂಥಿಯಾ ಡಿ’ಸೋಝಾ ಸೆಕೆಂಡ್ ರನ್ನರ್ ಅಪ್ ಆಗಿ ಗೌರವ ಪಡೆದಿದ್ದಾರೆ.

Post a Comment

أحدث أقدم