ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪಂಚ ಗ್ಯಾರಂಟಿ ಅನುಷ್ಠಾನ ಸಮಾಲೋಚನಾ ಸಭೆ.

ಸುಬ್ರಹ್ಮಣ್ಯ: ಕರ್ನಾಟಕ ರಾಜ್ಯ ಪಂಚ ಗ್ಯಾರಂಟಿ ಅನುಷ್ಠಾನ ಯೋಜನೆಯ ರಾಜ್ಯ ಉಪಾಧ್ಯಕ್ಷರು ಹಾಗೂ ಮೈಸೂರು ವಿಭಾಗ–ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಡಾ. ಪುಷ್ಪ ಅಮರನಾಥ್ ಅವರ ಅಧ್ಯಕ್ಷತೆಯಲ್ಲಿ ಸಮಾಲೋಚನಾ ಸಭೆ ಮತ್ತು ಪಲಾನುಭವಿಗಳೊಂದಿಗೆ ನೇರ ಸಂವಾದ ಕಾರ್ಯಕ್ರಮ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಸಭಾಂಗಣದಲ್ಲಿ ಭಾನುವಾರ ನಡೆಯಿತು.

ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಕುಕ್ಕೆ ಸುಬ್ರಹ್ಮಣ್ಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಕಡಬ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುದೀರ್ ಕುಮಾರ್ ಶೆಟ್ಟಿ, ಸುಳ್ಯ ತಾಲೂಕು ಅದೇ ಸಮಿತಿ ಅಧ್ಯಕ್ಷ ಹಮೀದ್, ಕಡಬ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ, ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಅನೇಕ ಸಂಖ್ಯೆಯ ಫಲಾನುಭವಿಗಳು ಉಪಸ್ಥಿತರಿದ್ದರು.

ಸಭೆಯಲ್ಲಿ ಮಾತನಾಡಿದ ಡಾ. ಪುಷ್ಪ ಅಮರನಾಥ್ ಅವರು,
“ಪಂಚ ಗ್ಯಾರೆಂಟಿ ಯೋಜನೆ ಯಶಸ್ವಿಯಾಗಲು ಜೋಡೆತ್ತುಗಳ ಅಧಿಕಾರಿಗಳು ಹಾಗೂ ಅನುಷ್ಠಾನ ಪ್ರಾಧಿಕಾರಗಳು ಸಮನ್ವಯದಿಂದ, ದೃಢವಾಗಿ ಕೆಲಸ ಮಾಡಬೇಕು. ಗ್ಯಾರೆಂಟಿ ಯೋಜನೆಗಳು ಆರಂಭಗೊಂಡು ಈಗ ಮುಕ್ಕಾಲು ವರ್ಷ ಪೂರೈಸಿದೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಗ್ಯಾರೆಂಟಿಗಳ ತಲುಪುವಿಕೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿರುವುದಕ್ಕಾಗಿ ಎಲ್ಲಾ ಅಧಿಕಾರಿಗಳಿಗೂ ಹಾಗೂ ಸಮಿತಿಗಳಿಗೆ ಅಭಿನಂದನೆಗಳು,” ಎಂದು ಹೇಳಿದರು.

ತಮ್ಮ ವಿಭಾಗದಲ್ಲಿನ ಅನುಷ್ಠಾನ ಪ್ರಗತಿ, ಪಲಾನುಭವಿಗಳಿಗೆ ತಲುಪುತ್ತಿರುವ ಸೌಲಭ್ಯಗಳ ನೇರ ಪ್ರತಿಕ್ರಿಯೆ, ತೊಂದರೆ–ತಡೆಗಳನ್ನು ಪರಿಹರಿಸುವ ಮಾರ್ಗ ಇತ್ಯಾದಿ ವಿಷಯಗಳ ಕುರಿತು ಸಭೆಯಲ್ಲಿ ವಿಶ್ಲೇಷಣೆ ನಡೆಯಿತು.




ಪಲಾನುಭವಿಗಳ ಅಭಿಪ್ರಾಯಗಳನ್ನು ನೇರವಾಗಿ ಆಲಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ತಕ್ಷಣದ ಸೂಚನೆಗಳನ್ನು ನೀಡುವ ಮೂಲಕ ಕಾರ್ಯಕ್ರಮ ಸಮಗ್ರ ಸಂವಾದ ವೇದಿಕೆಯಾಗಿ ಪರಿಣಮಿಸಿತು.

Post a Comment

أحدث أقدم