ಚಂಪಾ ಷಷ್ಠಿ ಜಾತ್ರಾಮಹೋತ್ಸವ: ರಥಗಳಿಗೆ ಗೂಟ ಪೂಜೆ ಭಕ್ತಿಭಾವದಿಂದ ನೆರವೇರಿತು.

ಸುಬ್ರಹ್ಮಣ್ಯ, ನವೆಂಬರ್ 5:ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾ ಷಷ್ಠಿ ಜಾತ್ರಾಮಹೋತ್ಸವದ ಅಂಗವಾಗಿ ಇಂದು ಕಾರ್ತಿಕ ಹುಣ್ಣಿಮೆಯ ಶುಭ ದಿನದಲ್ಲಿ ರಥಗಳಿಗೆ ಗೂಟ ಪೂಜೆ ಭಕ್ತಿಭಾವದಿಂದ ನೆರವೇರಿತು.

ಕಾರ್ಯಕ್ರಮದ ಆರಂಭದಲ್ಲಿ ಕ್ಷೇತ್ರ ಪುರೋಹಿತ ಮಧುಸೂದನ ಕಲ್ಲೂರಾಯ ಅವರ ನೇತೃತ್ವದಲ್ಲಿ ವೈದಿಕ ವಿದಿವಿಧಾನಗಳೊಂದಿಗೆ ರಥಗಳಿಗೆ ಅಳವಡಿಸುವ ಗೂಟಗಳಿಗೆ ಪೂಜೆ ನೆರವೇರಿಸಲಾಯಿತು. ಬಳಿಕ ಶ್ರೀ ದೇವರ ಪ್ರಸಾದವನ್ನು ಗೂಟಗಳಿಗೆ ಹಚ್ಚಿ ಶುದ್ಧೀಕರಣ ಕ್ರಮ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಕ್ಷೇತ್ರದ ಮೂಲ ನಿವಾಸಿಗಳಾದ ಮಲೆಕುಡಿಯ ಜನಾಂಗದವರು ಪರಂಪರೆಯಂತೆ ಶ್ರೀ ದೇವರ ಆರಾಧನೆ ಸಲ್ಲಿಸಿ ಬ್ರಹ್ಮರಥ ಮತ್ತು ಪಂಚಮಿರಥಗಳಿಗೆ ಗೂಟ ಅಳವಡಿಸುವ ಧಾರ್ಮಿಕ ವಿಧಿ ನೆರವೇರಿಸಿದರು. ಇದು ಜಾತ್ರೆಯ ಪೂರ್ವಭಾವಿ ಆಚರಣೆಯ ಪ್ರಮುಖ ಅಂಗವಾಗಿ ಪರಿಗಣಿಸಲಾಗಿದೆ.


ಕಾರ್ಯಕ್ರಮದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸದಸ್ಯರು ಹಾಗೂ ಅನೇಕ ಭಕ್ತರು ಉಪಸ್ಥಿತರಿದ್ದರು. 

ಚಂಪಾ ಷಷ್ಠಿ ಮಹೋತ್ಸವದ ಮುಖ್ಯ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ವೈಭವದಿಂದ ನಡೆಯಲಿವೆ.

Post a Comment

أحدث أقدم