*ನೆಲ್ಯಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾ ಮಹೋತ್ಸವ...*

ಡಿಸೆಂಬರ್ 30 ರಂದು ನೆಲ್ಯಾಡಿ -ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಕುಂಟು ಕುಡೆಲುರಘು ರಾಮತಂತ್ರಿಗಳ ಪೌರೋಹಿತ್ಯದಲ್ಲಿ ನಡೆಯಿತು.
ಬೆಳಿಗ್ಗೆ ನಿತ್ಯಪೂಜೆ ಕಲಶಾಭಿಷೇಕಗಳು ನಡೆದು, ಮದ್ಯಾಹ್ನ ಮಹಾಪೂಜೆ, ಸಂಜೆ ದುರ್ಗಾಪೂಜೆ, ಮಹಾರಂಗ ಪೂಜಾದಿಗಳು ನಡೆದವು.
ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ರವಿಚಂದ್ರ ಹೊಸವಕ್ಲು, ಕಾರ್ಯದರ್ಶಿ ರಾಕೇಶ್, ಕೋಶಾಧಿ ಕಾರಿ ಸುಧೀರ್ ಕುಮಾರ್ ಕೆ. ಎಸ್, ಉಪಾಧ್ಯಕ್ಷ ರಘುನಾಥ, ಜೊತೆ ಕಾರ್ಯದರ್ಶಿ ರಮೇಶ್ ಬಾಣಜಾಲ್,ಸದಸ್ಯರಾದ ಚಂದ್ರ ಶೇಖರ್ ಬಾಣಜಾಲ್, ಮೋಹನ್ ಕುಮಾರ್, ರವಿಪ್ರಸಾದ್ ಶೆಟ್ಟಿ, ಉಮೇಶ್ ಪೂಜಾರಿ, ಪ್ರಹ್ಲಾದ್ ಶೆಟ್ಟಿ, ನಾರಾಯಣ ಶೆಟ್ಟಿ, ಶೇಖರ್ ಭಂಡಾರಿ,ವಿನೋದ್ ಕುಮಾರ್, ರಕ್ಷಿತ್, ದಯಾನಂದ ಆದರ್ಶ, ಅಣ್ಣಿ ಎಲ್ತೀಮಾರ್, ಕೃಷ್ಣಪ್ಪ ಕೆ ನಿಡ್ಡೋಡಿ ಗೌರವ ಸಲಹೆಗಾರರಾದ ಟಿ. ಕೆ. ಶಿವದಾಸನ್, ಡಾ. ಸದಾನಂದ ಕುಂದರ್, ಅರ್ಚಕರಾದ ಅಶ್ವಥ್ ನಾರಾಯಣ ಭಟ್ ಮೊದಲಾದವರು ಉಪಸ್ಥಿತರಿದ್ದರು.

Post a Comment

أحدث أقدم