ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಮಾಜಿ ನೌಕರನೊಬ್ಬ HP ಕಂಪನಿಯ ಲ್ಯಾಪ್‌ಟಾಪ್ ಕಳವು ಮಾಡಿರುವ ಪ್ರಕರಣ ದಾಖಲಾಗಿದೆ.
ಪಿರ್ಯಾಧಿದಾರರಾದ ಮಹಾವೀರ್ ಸಿಂಗ್ (28), ಔರಮ್ ಹೋಟೆಲ್ ಮ್ಯಾನೇಜರ್ ಇವರ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ದಿನಾಂಕ 23.10.2025 ರಂದು ಗುಜರಾತ್ ಮೂಲದ ಅವಿನಾಶ್ ಪಾಂಡೆ ಎನ್ನುವವನು ಔರಮ್ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿದ್ದಾನೆ. ನಂತರ 07.11.2025 ರಂದು ಯಾರಿಗೂ ಮಾಹಿತಿ ನೀಡದೇ ಹೋಟೆಲ್ ಬಿಟ್ಟು ತೆರಳಿದ್ದಾನೆ.
ಅದಾದ ನಂತರ ಹೋಟೆಲ್‌ನಲ್ಲಿ ಇದ್ದ HP ಲ್ಯಾಪ್‌ಟಾಪ್ (Model: HP 245G9) ಹಾಗೂ Redmi ಮೊಬೈಲ್ ಫೋನ್ ಕಾಣೆಯಾಗಿದ್ದು, ಹುಡುಕಾಟಕ್ಕೂ ಪತ್ತೆಯಾಗದ ಹಿನ್ನೆಲೆಯಲ್ಲಿ ಸಂಶಯದ ಮೇಲೆ ಆರೋಪಿಯನ್ನು ಸಂಪರ್ಕಿಸಿದಾಗ ಆತನು ಲ್ಯಾಪ್‌ಟಾಪ್ ಮತ್ತು ಮೊಬೈಲ್ ತೆಗೆದುಕೊಂಡು ಹೋಗಿರುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ 16.11.2025 ರಂದು ಕೂರಿಯರ್ ಮುಖಾಂತರ ಮೊಬೈಲ್ ಫೋನ್ ಕಳುಹಿಸಿದರೂ, ಲ್ಯಾಪ್‌ಟಾಪ್ ಹಿಂತಿರುಗಿಸಲಾಗಿಲ್ಲ. ಬಳಿಕ ಕರೆ ಮಾಡಿದರೂ ಫೋನ್ ಸ್ವೀಕರಿಸದಿದ್ದಾನೆ ಎಂದು ಪಿರ್ಯಾಧಿದಾರರು ದೂರಿನಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಪೊಲೀಸ್ ಇಲಾಖೆಯಂತೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಅ.ಕ್ರ: 64/2025 ರಂತೆ BNS-2023 ಕಲಂ 305 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಪೋಲೀಸ್ ತನಿಖೆ ಮುಂದುವರೆಸಿದೆ. ಲ್ಯಾಪ್‌ಟಾಪ್ ಮೌಲ್ಯ ಸುಮಾರು ₹30,000 ಆಗಿರುತ್ತದೆ ಎಂದು ಅಂದಾಜಿಸಲಾಗಿದೆ.
إرسال تعليق