ಕುಕ್ಕೆ ಸುಬ್ರಹ್ಮಣ್ಯ ಬೈಪಾಸ್ ರಸ್ತೆ ಬದಿಗಳಲ್ಲಿ ಕಸದ ರಾಶಿ ರಾಶಿ.ಸ್ವಚ್ಛತಾ ಕಾರ್ಯ ಕೈಗೊಂಡ ರವಿಕಕ್ಕೆ ಪದವು ಸಮಾಜ ಸೇವ ಟ್ರಸ್ಟ್.

ಸುಬ್ರಮಣ್ಯ ಜನವರಿ 11 : ಭಾರತ ದೇಶದ ಪ್ರಮುಖ ನಾಗರಾಧನೆಯ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ದೂರದ ರಾಜ್ಯಗಳಿಂದ ಹಾಗೂ ಊರುಗಳಿಂದ ಅತ್ಯಧಿಕ ಭಕ್ತರು ಬಂದು ದೇವರ ದರ್ಶನ, ಸೇವೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ಹೋಗುತ್ತಿದ್ದಾರೆ. ಆದರೆ ಅಷ್ಟೇ ಕಸದ ರಾಶಿ ರಾಶಿಗಳು ಸುಬ್ರಹ್ಮಣ್ಯ ಪಾರ್ಕಿಂಗ್ ಪ್ರದೇಶ ಬೈಪಾಸ್ ರಸ್ತೆಯ ಇಕ್ಕಲಗಳಲ್ಲಿ ತುಂಬುತ್ತಿದ್ದು ಅದನ್ನ ಸ್ವಚ್ಛಗೊಳಿಸುವುದು ಸವಲಾಗಿರುತ್ತದೆ. ದಿನನಿತ್ಯ ಸಾವಿರಾರು ವಾಹನಗಳು ಪಾರ್ಕಿಂಗ್ ಪ್ರದೇಶದಲ್ಲಿ ಪಾರ್ಕಿಂಗ್ ಮಾಡಲಾಗಿದ್ದು ಅಲ್ಲಿ ಹಾಗೂ ರಸ್ತೆ ಇಕ್ಕೆಲಗಳಲ್ಲಿ ಎಲ್ಲೆಂದರಲ್ಲಿ ಕಸವನ್ನು ಹಾಕುತ್ತಿರುವುದು ಕಂಡುಬಂದಿದೆ. ಕಳೆದ 523 ವಾರಗಳಿಂದ ನಿರಂತರವಾಗಿ ಸ್ವಚ್ಛತಾ ಕಾರ್ಯವನ್ನ ಕೈಗೊಂಡಿರುವ ರವಿಕಕ್ಕೆ ಪದವು ಸಮಾಜ ಸೇವ ಟ್ರಸ್ಟ್ ನ ಸುಮಾರು 60ಕ್ಕೂ ಮಿಕ್ಕಿ ಸ್ವಯಂಸೇವಕರು ಡಾಕ್ಟರ್ ರವಿ ಕಕ್ಕೆ ಪದವು ಅವರ ನೇತೃತ್ವದಲ್ಲಿ ಸ್ವಚ್ಛಗೊಳಿಸುತ್ತಾ ಬಂದಿರುತ್ತಾರೆ. ಇಂದು ರವಿವಾರ ಬೆಳ್ಳಂಬೆಳಗ್ಗೆಯಲ್ಲಿ ಟ್ರಸ್ಟ್ ನ ಸ್ವಯಂಸೇವಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದು ಹಲವು ಗಂಟೆಗಳ ಕಾಲ ಸೇವೆಯನ್ನು ಸಲ್ಲಿಸಿರುವುದನ್ನ ಇಲ್ಲಿ ಗಮನಿಸಬಹುದು.
 ಶ್ರೀ ಕ್ಷೇತ್ರಕ್ಕೆ ದಿನನಿತ್ಯ ಸಾವಿರಾರು ಭಕ್ತಾದಿಗಳು ಬರುತ್ತಿದ್ದು ಪ್ಲಾಸ್ಟಿಕ್ ಬಾಟಲುಗಳು ಪ್ಲಾಸ್ಟಿಕ್ ಚೀಲ ಪ್ಲಾಸ್ಟಿಕ್ ತಟ್ಟೆಗಳು ಇತ್ಯಾದಿಗಳನ್ನು ಎಷ್ಟೇ ಜಾಗೃತಿ ಮೂಡಿಸಿದರು ಅದನ್ನ ಗಣನೆಗೆ ತೆಗೆದುಕೊಳ್ಳದೆ ಎಸೆದಿರುತ್ತಾರೆ . ಶ್ರೀ ದೇವಳದ ಸಿಬ್ಬಂದಿಗಳು ಕೂಡ ಸ್ವಚ್ಛತೆಯನ್ನ ಕೈಗೊಳ್ಳುತ್ತಿದ್ದರು ಮತ್ತೆ ಮತ್ತೆ ಅಷ್ಟೇ ಕಸ ಕಡ್ಡಿ ಪ್ಲಾಸ್ಟಿಕ್ ಬಾಟಲ್ ಪ್ಲಾಸ್ಟಿಕ್ ಚೀಲ ಹಾಗೂ ಕಚ್ಚ ವಸ್ತುಗಳನ್ನು ಸ್ವಚ್ಛ ಗೊಳಿಸುತ್ತಿರುವುದು ಸಾಮಾನ್ಯವಾಗಿದೆ. ಈ ಬಗ್ಗೆ ಡಾ. ರವಿ ಕಕ್ಕೆ ಪದವು ಅವರು ಪ್ರತಿ ವಾರ ಜಾಗೃತಿಯ ಸಂದೇಶಗಳನ್ನ ಭಕ್ತರಿಗೆ ನೀಡುತ್ತಾ ಬಂದಿರುತ್ತಾರೆ. ದೂರ ದೂರದ ಊರುಗಳಿಂದ ಶ್ರೀ ಕ್ಷೇತ್ರಕ್ಕೆ ಬರತಕ್ಕ ಭಕ್ತಾದಿಗಳು ಏನೇ ಪ್ಲಾಸ್ಟಿಕ್ ವಸ್ತುಗಳನ್ನು ಇದ್ದರೂ ಅದನ್ನ ತಾವು ಮತ್ತೆ ತಮ್ಮ ಊರಿಗೆ ತೆಗೆದುಕೊಂಡು ಹೋಗಬೇಕು ಅಥವಾ ಎಲ್ಲಿ ಡಸ್ಟ್ ಬಿನ್ ಇದೆ ಅಲ್ಲಿ ಹಾಕಬೇಕೆಂಬ ಜಾಗೃತಿಯನ್ನು ಮೂಡಿಸುವುದರೊಂದಿಗೆ ಸಂದೇಶಗಳನ್ನು ಕೂಡ ಕಳುಹಿಸಿರುತ್ತಾರೆ.

 ಜಾಗೃತಿಯ ಸಂದೇಶ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ದೂರದ ಊರುಗಳಿಂದ ದೇವರ ದರ್ಶನ ಹಾಗೂ ಸೇವೆಗಾಗಿ ಬರುವ ಭಕ್ತಾದಿಗಳು ದಯಮಾಡಿ ಪ್ಲಾಸ್ಟಿಕ್ ಬಾಟಲ್ ಚೀಲ ತಟ್ಟೆ ಅಥವಾ ಪ್ಲಾಸ್ಟಿಕ್ ಗೆ ಸಂಬಂಧಪಟ್ಟ ಯಾವುದೇ ವಸ್ತುಗಳನ್ನ ತರಬಾರದಾಗಿ ಹಾಗೂ ಒಂದು ವೇಳೆ ತಂದಲ್ಲಿ ಅಥವಾ ಇಲ್ಲಿಯ ಅಂಗಡಿಯಲ್ಲಿ ಖರೀದಿಸಿದಲ್ಲಿ ಅದನ್ನ ಡಸ್ಟ್ ಬಿನ್ ಗಳಲ್ಲಿ ಹಾಕಿ, ಅಲ್ಲದಿದ್ದರೆ ತಾವು ತಮ್ಮ ವಾಹನದಲ್ಲಿ ಅದನ್ನ ತಮ್ಮ ಊರಿಗೆ ಕಂಡು ಹೋಗಬೇಕಾಗಿ ವಿನಂತಿ. ಎಲ್ಲಾ ಭಕ್ತಾದಿಗಳು ಇದನ್ನ ಕಡ್ಡಾಯವಾಗಿ ಅನುಸರಿಸುವುದರೊಂದಿಗೆ ಕ್ಷೇತ್ರದ ಪವಿತ್ರತೆಯನ್ನ, ಸ್ವಚ್ಛತೆಯನ್ನ ಕಾಪಾಡಬೇಕೆಂದು ಡಾಕ್ಟರ್. ರವಿಕಕ್ಕೆ ಪದವು ಅವರು ವಿನಂತಿಸಿದ್ದಾರೆ.

Post a Comment

أحدث أقدم