ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಸುಮಾರು ₹9 ಲಕ್ಷ ಮೌಲ್ಯದ ಬೆಳ್ಳಿ ದಾನ; ಬೆಂಗಳೂರು ವೈದ್ಯ ದಂಪತಿಯಿಂದ ವಿಶೇಷ ಸೇವೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ:ಸುಮಾರು 9 ಲಕ್ಷ ರೂಪಾಯಿ ಮೌಲ್ಯದ 3 ಕೆ.ಜಿ ಬೆಳ್ಳಿ ದಾನವನ್ನು ಬೆಂಗಳೂರು ನಿವಾಸಿಗಳಾದ ಡಾ. ಕುಶಾಲ್ ಲಕ್ಷ್ಮಣ್ ಹಾಗೂ ಅವರ ಪತ್ನಿ ಡಾ. ಗೃತ ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಮರ್ಪಿಸಿದರು.
ಜನವರಿ 24ರಂದು ದೇವಸ್ಥಾನಕ್ಕೆ ಆಗಮಿಸಿದ ವೈದ್ಯ ದಂಪತಿಗಳು ಶ್ರೀ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಪೂಜೆ ಹಾಗೂ ಸೇವೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವರಿಗೆ ಸಮರ್ಪಿಸಲಾದ ಬೆಳ್ಳಿ ದಾನವನ್ನು ದೇವಾಲಯದ ಆಡಳಿತದ ಮೂಲಕ ಸ್ವೀಕರಿಸಲಾಯಿತು.
ಕಾರ್ಯಕ್ರಮದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ,
ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಸತೀಶ್ ಕುಜುಗೋಡು,
ಸುಳ್ಯ ವೆಂಕಟರಮಣ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಪಿ. ವಿಶ್ವನಾಥ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ವೆಂಕಟರಮಣ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಪಿ. ವಿಶ್ವನಾಥ್ ಅವರ ಆಪ್ತರಾಗಿರುವ ಡಾ. ಕುಶಾಲ್ ಲಕ್ಷ್ಮಣ್ ಹಾಗೂ ಡಾ. ಗೃತ ಅವರು ಭಕ್ತಿಭಾವದಿಂದ ಶ್ರೀ ದೇವರಿಗೆ ಸೇವೆ ಸಲ್ಲಿಸಿ ದಾನ ಸಮರ್ಪಿಸಿದ್ದು ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು.
ದಾನ ಮತ್ತು ಸೇವೆಯ ಹಿನ್ನೆಲೆಯಲ್ಲಿ ವೈದ್ಯ ದಂಪತಿಗಳನ್ನು ದೇವಸ್ಥಾನದ ವತಿಯಿಂದ ವಿಶೇಷವಾಗಿ ಗೌರವಿಸಲಾಯಿತು.

Post a Comment

أحدث أقدم