ಫೆ.5ರಿಂದ 7ರವರೆಗೆ ನೂತನ ಸಂಗೀತಶಾಲೆ, ಸಭಾಭವನ ಲೋಕಾರ್ಪಣೆ – ರಾಷ್ಟ್ರಮಟ್ಟದ ಗಣ್ಯರ ಪಾಲ್ಗೊಳ್ಳಿಕೆ**
ಬಜತ್ತೂರು (ಪುತ್ತೂರು):
ಸ್ಥಾಪಕಗುರು ಸಂಗೀತರತ್ನ ಕಾಂಚನ ವೆಂಕಟಸುಬ್ರಹ್ಮಣ್ಯಂ ಅವರ 105ನೇ ಜನ್ಮವರ್ಷ ಮಹೋತ್ಸವ ಹಾಗೂ 72ನೇ ವರ್ಷದ ಕಾಂಚನೋತ್ಸವದ ಅಂಗವಾಗಿ, ಕಾಂಚನ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ (ರಿ.) ವತಿಯಿಂದ ಬಜತ್ತೂರು ಗ್ರಾಮದಲ್ಲಿ ನಿರ್ಮಿಸಲಾದ ನೂತನ ಸಂಗೀತಶಾಲೆ, ಸಭಾಭವನ ಹಾಗೂ ಭೋಜನಶಾಲೆಗಳ ಲೋಕಾರ್ಪಣೆ ಫೆಬ್ರವರಿ 5ರಿಂದ 7, 2026ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.
ಮೂರು ದಿನಗಳ ಕಾಲ ನಡೆಯುವ ಈ ಐತಿಹಾಸಿಕ ಸಂಗೀತ ಹಬ್ಬದಲ್ಲಿ ಧಾರ್ಮಿಕ ಕಾರ್ಯಕ್ರಮಗಳು, ಸಂಗೀತ ಕಛೇರಿಗಳು, ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಫೆಬ್ರವರಿ 5, 2026 (ಗುರುವಾರ) ಸಂಜೆ 5 ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಂಗೀತ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ.
ಫೆಬ್ರವರಿ 6, 2026 (ಶುಕ್ರವಾರ) ಸಂಜೆ 4.30ಕ್ಕೆ ನೂತನ ಸಂಗೀತಶಾಲೆ ಕಟ್ಟಡ ಮತ್ತು ಸಭಾಭವನದ ಉದ್ಘಾಟನಾ ಸಮಾರಂಭ ನಡೆಯಲಿದ್ದು,
ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ವಹಿಸಲಿದ್ದಾರೆ.
ಅಧ್ಯಕ್ಷತೆಯನ್ನು ಪರಮಪೂಜ್ಯ ಪದ್ಮವಿಭೂಷಣ ಡಾ. ವೀರೇಂದ್ರ ಹೆಗ್ಗಡೆಯವರು ವಹಿಸಲಿದ್ದಾರೆ.
ಉದ್ಘಾಟನೆ ಮಾಡುವವರು ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್.
ಮುಖ್ಯ ಅತಿಥಿಗಳಾಗಿ ಪುತ್ತೂರು ಶಾಸಕ ಶ್ರೀ ಅಶೋಕ ರೈ ಹಾಗೂ ವೇ.ಬ್ರ. ಶ್ರೀ ವಿಷ್ಣುಪ್ರಸಾದ ಹೆಬ್ಬಾರ್ ಉಪಸ್ಥಿತರಿರುವರು.
ಫೆಬ್ರವರಿ 7, 2026 (ಶನಿವಾರ) ಕಾಂಚನ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು,
God of Indian Violin – ಪದ್ಮವಿಭೂಷಣ ಡಾ. ಎಲ್. ಸುಬ್ರಹ್ಮಣ್ಯಂ ಅವರಿಗೆ ಕಾಂಚನ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಪ್ರಶಸ್ತಿ ಪ್ರದಾನ ಮಾಡುವವರು ಸನ್ಮಾನ್ಯ ಬಾನ್ಸುರಿ ಸ್ವರಾಜ್, ಲೋಕಸಭಾ ಸದಸ್ಯರು.
ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಸನ್ಮಾನ ಸದಾನಂದಗೌಡ ಮತ್ತು ಶ್ರೀ ಗಂಗಾಧರ ಗೌಡ ಭಾಗವಹಿಸಲಿದ್ದಾರೆ.
ಇದೇ ದಿನಗಳಲ್ಲಿ ಪದ್ಮವಿಭೂಷಣ ಡಾ. ಎಲ್. ಸುಬ್ರಹ್ಮಣ್ಯಂ, ಪದ್ಮಶ್ರೀ ಕವಿತಾ ಕೃಷ್ಣಮೂರ್ತಿ ಸುಬ್ರಹ್ಮಣ್ಯಂ, ಪದ್ಮಶ್ರೀ ಶಿವಮಣಿ ಹಾಗೂ ಬಳಗ, ಜೊತೆಗೆ ಕಾಂಚನ ಶ್ರೀರಂಜನಿ, ಕಾಂಚನ ಶ್ರುತಿರಂಜನಿ, ಕಾಂಚನ ಸುಮನಸ ರಂಜನಿ, ಕುಳೂರು ರವಿಚಂದ್ರ, ಕೆ.ಯು. ಜಯಚಂದ್ರ ರಾವ್ ಅವರಿಂದ ಅದ್ದೂರಿ ಸಂಗೀತ ಕಛೇರಿಗಳು ನಡೆಯಲಿವೆ.
ಫೆಬ್ರವರಿ 5ರಿಂದ 7ರವರೆಗೆ ನವ ಪ್ರಾಸಾದಗಳ ಶುಭ ಪ್ರವೇಶದ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿದ್ದು, ಭಾಗವಹಿಸುವ ಭಕ್ತರಿಗೆ ಭೋಜನ ವ್ಯವಸ್ಥೆಯೂ ಮಾಡಲಾಗಿದೆ.
ಈ ಐತಿಹಾಸಿಕ ಸಂಗೀತೋತ್ಸವಕ್ಕೆ ಸರ್ವ ಸಂಗೀತಾಸಕ್ತರು, ಭಕ್ತರು ಹಾಗೂ ಸಾರ್ವಜನಿಕರು ಕುಟುಂಬ ಸಮೇತರಾಗಿ ಆಗಮಿಸುವಂತೆ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ (ರಿ.), ಊರಿನ ಸಮಸ್ತ ಸಂಸ್ಥೆಗಳು ಹಾಗೂ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.
إرسال تعليق