ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂರರ ಸಂಭ್ರಮವನ್ನು ಆಚರಿಸಿ ಹಿಂದೂ ಸಮಾಜವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ, ಸಾಮಾಜಿಕ ಪಂಚ ಕಾರ್ಯಗಳನ್ನು ಜಾಗೃತಿ ಗೊಳಿಸುವ ಕಾರ್ಯಕ್ರಮ ವಾಗಿ ಫೆಬ್ರವರಿ 1ರಂದು ನೆಲ್ಯಾಡಿ ಗಾಂಧಿ ಮೈದಾನ ದಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿ ಕಡಬ ಇವರ ನೇತೃತ್ವದಲ್ಲಿ ಐದು ಗ್ರಾಮಗಳನೊಳಗೊಂಡ ನೆಲ್ಯಾಡಿ ಮಂಡಲದ ವತಿಯಿಂದ ನಡೆದ ಬ್ರಹತ್ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸುಚಿ ಭಾಷಣ ನೀಡಿದ ಸಂಘದ ಪ್ರಮುಖರು ರವಿ ಮಂಡ್ಯ ಮಾತನಾಡುತ್ತಾ " ಹಿಂದೂ ಧರ್ಮ ಕೇವಲ ಮತವಲ್ಲ ಇದೊಂದು ಜೀವನ ಪದ್ಧತಿ, ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣದ ಕೆಲಸ ನಡೆಯಬೇಕಾಗಿದೆ, ಸಂಘ 100 ರ ಸಂಭ್ರಮದಲ್ಲಿ ಆಚರಣೆಗೆ ಸೀಮಿತ ಗೊಳಿಸದೆ ಹಿಂದೂ ಸಂಗಮ ಕಾರ್ಯಕ್ರಮದ ಮೂಲಕ ಪ್ರತಿಯೊಬ್ಬ ಹಿಂದೂವಿಗೂ ಸಾಮಾಜಿಕ ಚಿಂತನೆಯ ಹೊಣೆಗಾರಿಕೆಯನ್ನು ನೀಡಿದೆ ಎಂದರು.
ಮುಖ್ಯ ಅತಿಥಿ ಗಳಾಗಿ ಭಾಗವಹಿಸಿದ್ದ ಶ್ರೀಮತಿ ವಸಂತಿ ರುಕ್ಮಯ ಗೌಡ ಮಾತನಾಡಿ ಹಿಂದೂ ಸಮಾಜ ಜಾತಿ ಪದ್ಧತಿಯ ಅಂಧಕಾರದಿಂದ ಹೊರಬಂದು, ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲೇ ಉತ್ತಮ ಸಂಸ್ಕಾರ ನೀಡುವ ದಿಸೆಯಲ್ಲಿ ಸಾಗಬೇಕು ಎಂದರು.
ಪಟ್ಲಡ್ಕ ಆದಿ ಮೋಗೇರರ್ಕಳ ಸ್ವಾಮಿ ಕೊರಗಜ್ಜ ದೈವಸ್ಥಾನದ ಉಪಾಧ್ಯಕ್ಷರು ಹರೀಶ್ ಪಟ್ಲಡ್ಕ ಅಧ್ಯಕ್ಷತೆ ವಹಿಸಿದ್ದರು. ದೊಂತಿಲ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಆಡಳಿತ ಮೋಕ್ತೆಸರ ಸುಬ್ರಮಣ್ಯ ಬಾಳ್ತೀಲ್ಲಾಯ, ಪಡುಬೆಟ್ಟು ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ಆಡಳಿತ ಮೋಕ್ತೆಸರ ಡಾ. ಸುಬ್ರಮಣ್ಯ ಶಬರಾಯ, ಕೊಣಾಲು ವಿಷ್ಣು ಮೂರ್ತಿ ದೇವಸ್ಥಾನದ ಆಡಳಿತ ಮೋಕ್ತೆಸರ ಮಾದವ ಸರಳಾಯ, ಕಾವು ಕೌಕ್ರಾಡಿ ತ್ರಿಗುಣಾತ್ಮಿಕ ದುರ್ಗಾಪರಮೇಶ್ವರಿ ದೇವಳದ ಅಧ್ಯಕ್ಷರು ಕುಶಾಲಪ್ಪ ಗೌಡ ಪೂವಾಜೆ, ನೆಲ್ಯಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ರವಿ ಚಂದ್ರ ಹೊಸವಕ್ಲು, ಹಾರ್ಪಲ ಶಾಸ್ತರೇಶ್ವರ ದೇವಸ್ಥಾನ ಅಧ್ಯಕ್ಷ ಸುಂದರ ಗೌಡ ಅತ್ರಿಜಾಲ್, ಮಾದೇರಿ ಶಬರಿಗಿರಿ ಅಯ್ಯಪ್ಪ ದೇವಸ್ಥಾನದ ಅಧ್ಯಕ್ಷ ಶಿವರಾಮ ಗೌಡ ಕೋರಡೇಲು, ಇಚಲಂಪಾಡಿ ಗಂಗಾದರೇಶ್ವರ ದೇವಸ್ಥಾನದ ಅಧ್ಯಕ್ಷರು ಜಯರಾಜ್ ಕೊರಮೇರು ಮೊದಲಾದವರು ಉಪಸ್ಥಿತರಿದ್ದರು,ವಿಷ್ಣು ಸಹಸ್ರ ನಾಮ ಪಠಣ, ಭಜನೆ ಸಂಕೀರ್ತನೆ ಮತ್ತು ಶ್ರೀ ರಾಮ ವಿದ್ಯಾಲಯದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ, ಗೋಪೂಜೆ ಮತ್ತು ನಂದಿ ಪೂಜೆ ಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು, ರವಿಪ್ರಸಾದ್ ಶೆಟ್ಟಿರಾಮನಗರ ಸ್ವಾಗತಿಸಿ, ಸುಪ್ರಿತಾ ರವಿಚಂದ್ರ ಧನ್ಯವಾದ ಸಮರ್ಪಿಸಿ, ಶೀನಪ್ಪಮಾಸ್ಟರ್ ಮತ್ತು ಸುರೇಶ್ ಪಡಿಪಂಡ ನಿರೂಪಿಸಿದರು.
إرسال تعليق